Mysore
23
light rain

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಸುಲಭ ಜಯ

ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ ಗುರುವಾರ ಇಟಲಿ ತಂಡದ ವಿರದ್ಧ 42 ರನ್‌ಗಳ ಸುಲಭ ಗೆಲುವು ಸಾಧಿಸುವುದರೊಂದಿಗೆ ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಗಳಿಸಿದ್ದು, ಸೂಪರ್ ಎಂಟರ ಹಂತಕ್ಕೆ ಸಜ್ಜಾಗಿದೆ.

ಹೋಪ್ 46 ಎಸೆತಗಳಲ್ಲಿ 75 ರನ್ ಹೊಡೆದು ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಲು ನೆರವಾದರು.

ಉತ್ತರವಾಗಿ ಇಟಲಿ 18 ಓವರುಗಳಲ್ಲಿ 123 ರನ್‌ಗಳಿಗೆ ಆಲ್ ಔಟ್ ಆಯಿತು. ಹೋರಾಟ ಮುಗಿಸಿತು.

ಮಧ್ಯಮ ವೇಗಿಗಳಾದ ಮ್ಯಾಥ್ಯೂ ಫೋರ್ಡ್ (19ಕ್ಕೆ3), ಶಮರ್ ಜೋಸೆಫ್ (30ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಗುಡಕೇಶ್ ಮೋತಿ (24ಕ್ಕೆ2) ಅವರು ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಹೋಪ್ ಸರಾಗವಾಗಿ ಆಡಿ ಆರು ಬೌಂಡರಿ, ನಾಲ್ಕು ಸಿಕ್ಸರ್ ಬಾರಿಸಿದರು. ಇಟಲಿಯ ಅನುಭವಿ ಸ್ಪಿನ್ನರ್ಗಳಾದ ಬೆನ್ ಮನೆಂಟಿ (37ಕ್ಕೆ2) ಮತ್ತು ಕ್ರಿಶನ್ ಕಲುಗಮಗೆ (25ಕ್ಕೆ2) ಅವರು ವಿಂಡೀಸ್ ರನ್ವೇಗಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿದರು. ಇಟಲಿ ಒಂದು ಗೆಲುವಿನೊಡನೆ (ನೇಪಾಳ ವಿರುದ್ಧ) ತನ್ನ ಅಭಿಯಾನ ಮುಗಿಸಿತು.

Tags:
error: Content is protected !!