Mysore
17
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

T20 World Cup | ಕೆನಡಾ ವಿರುದ್ಧ ಯುಎಇಗೆ ರೋಚಕ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ‘ಡಿ’ಗುಂಪಿನ ಪಂದ್ಯದಲ್ಲಿ ಯುಎಇ ಕ್ರಿಕೆಟ್ ತಂಡವು ಕೆನಡಾ ತಂಡವನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿತು.

ಆರಂಭಿಕ ಆಟಗಾರ ಆರ್ಯಾಂಶ್ ಶರ್ಮಾ(ಔಟಾಗದೆ 74, 53 ಎಸೆತ, 6 ಬೌಂಡರಿ, 3 ಸಿಕ್ಸರ್)ಹಾಗೂ ಶುಐಬ್ ಖಾನ್(ಔಟಾಗದೆ 51, 29 ಎಸೆತ, 4 ಬೌಂಡರಿ, 4 ಸಿಕ್ಸರ್)ಅರ್ಧಶತಕದ ಕೊಡುಗೆ, ಜುನೈದ್ ಸಿದ್ದೀಕ್ ಅಮೋಘ ಬೌಲಿಂಗ್ ನೆರವಿನಿಂದ ಯುಎಇ ತಂಡ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಎರಡನೇ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆನಡಾ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 150 ರನ್ ಗಳಿಸಿತು. 5.1 ಓವರ್‌ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಕೆನಡಾ ತಂಡ ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಹರ್ಷ ಥಾಕರ್(50 ರನ್, 41 ಎಸೆತ, 2 ಬೌಂಡರಿ, 3 ಸಿಕ್ಸರ್)ಹಾಗೂ ನವನೀತ್ ಧಲಿವಾಲ್(34 ರನ್, 28 ಎಸೆತ, 4 ಬೌಂಡರಿ)ನಾಲ್ಕನೇ ವಿಕೆಟ್‌ಗೆ 58ರನ್ ಸೇರಿಸಿ ತಂಡಕ್ಕೆ ಆಧಾರವಾದರು. ವಿಕೆಟ್ ಕೀಪರ್ ಶ್ರೇಯಸ್ ಮೊವಾ(21 ರನ್, 21 ಎಸೆತ)ತಂಡದ ಮೊತ್ತ 150ಕ್ಕೆ ತಲುಪುವಲ್ಲಿ ನೆರವಾದರು.

ಪಂದ್ಯದಲ್ಲಿ ಗೆಲ್ಲಲು 151 ರನ್ ಗುರಿ ಬೆನ್ನಟ್ಟಿದ ಯುಎಇ ತಂಡವು 19.4 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತು. ಯುಎಇ ತಂಡವು 12.3 ಓವರ್‌ಗಳಲ್ಲಿ 66 ರನ್ ಸೇರಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ಆರ್ಯಾಂಶ್ ಹಾಗೂ ಶುಐಬ್ ಖಾನ್ ಐದನೇ ವಿಕೆಟ್‌ಗೆ ಕೇವಲ 42 ಎಸೆತಗಳಲ್ಲಿ 84 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಯುಎಇ ತಂಡಕ್ಕೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ರೋಚಕ ಜಯ ತಂದುಕೊಟ್ಟರು. 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಐಬ್ ಖಾನ್ ಪಂದ್ಯದ ಚಿತ್ರಣ ಬದಲಿಸಿದರು. ನಾಯಕ ಮುಹಮ್ಮದ್ ವಸೀಂ(4 ರನ್), ಅಲಿಶನ್ ಶರಾಫು(5 ರನ್), ಮಯಾಂಕ್ ಕುಮಾರ್(4 ರನ್)ಹಾಗೂ ಹರ್ಷಿತ್ ಕೌಶಿಕ್(5 ರನ್)ಅಲ್ಪ ಮೊತ್ತಕ್ಕೆ ಔಟಾದರು. ಕೆನಡಾದ ಪರವಾಗಿ ಸಾದ್ ಬಿನ್ ಝಾಫರ್(3-14)ಯಶಸ್ವಿ ಪ್ರದರ್ಶನ ನೀಡಿದರು. ತಂಡದ ಪರವಾಗಿ ಜುನೈದ್ ಸಿದ್ದೀಕಿ(5-35)ಐದು ವಿಕೆಟ್ ಕಬಳಿಸುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಯುಎಇ ತಂಡದ ಮೂರನೇ ಬೌಲರ್ ಎನಿಸಿಕೊಂಡರು. ಅಹ್ಮದ್ ರಝಾ(5-19)ಹಾಗೂ ಝುಬೈರ್ (5-21)ಈ ಸಾಧನೆ ಮಾಡಿದ್ದ ಇನ್ನಿಬ್ಬರು ಬೌಲರ್‌ಗಳಾಗಿದ್ದಾರೆ.

 

 

 

Tags:
error: Content is protected !!