Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಟಿ 20 ವಿಶ್ವಕಪ್‌ : ಅರ್ಧಶತಕ ಸಿಡಿಸಿದ ಸೂರ್ಯಕುಮಾರ್​, ರಾಹುಲ್​

ಮೆಲ್ಬೋರ್ನ್​(ಆಸ್ಟ್ರೇಲಿಯಾ): ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್​ ತಲುಪಿರುವ ಭಾರತ ತನ್ನ ಔಪಚಾರಿಕ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಸೂರ್ಯಕುಮಾರ್​ ಯಾದವ್ ಮತ್ತು ಕೆಎಲ್​ ರಾಹುಲ್ ಅವ​ರ ಭರ್ಜರಿ ಬ್ಯಾಟಿಂಗ್​ನಿಂದಾಗಿ 20 ಓವರ್​​ಗಳಲ್ಲಿ 5 ವಿಕೆಟ್​ಗೆ 186 ರನ್​ ಗಳಿಸಿ ಸವಾಲಿನ ಗುರಿ ನೀಡಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಭಾರತ, ನಾಯಕ ರೋಹಿತ್​ ಶರ್ಮಾರನ್ನು ಬೇಗ ಕಳೆದುಕೊಂಡಿತು. 15 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ರೋಹಿತ್​ ಭರ್ಜರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸಿದರು. ಬಳಿಕ ಈ ವಿಶ್ವಕಪ್​ನ ಅತ್ಯಧಿಕ ರನ್ನರ್​ ವಿರಾಟ್​ ಕೊಹ್ಲಿ 26 ರನ್​ ಗಳಿಸಿ ಔಟಾದರು.

ವಿಶ್ವಕಪ್​ನ ಆರಂಭಿಕ ಪಂದ್ಯಗಳಲ್ಲಿ ರನ್​ಗಳಿಸದೇ ಟೀಕೆಗೆ ಗುರಿಯಾಗಿದ್ದ ಕನ್ನಡಿಗ ಕೆಎಲ್​ ರಾಹುಲ್​ ಸತತ 2 ನೇ ಅರ್ಧಶತಕ ಗಳಿಸಿದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 50 ರನ್​ ಗಳಿಸಿ ಔಟಾಗಿದ್ದ ರಾಹುಲ್​ ಈ ಪಂದ್ಯದಲ್ಲೂ ಸಿಕ್ಸರ್​ ಸಿಡಿಸಿ 51 ರನ್​ ಗಳಿಸಿದರು. ಮರು ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟಾದರು. ಎರಡು ಬಾರಿಯೂ ಅರ್ಧಶತಕ ಗಳಿಸಿದ ಮರು ಎಸೆತದಲ್ಲೇ ವಿಕೆಟ್​ ನೀಡಿ ಐವತ್ತರ ಆಟ ಅನುಭವಿಸಿದರು.

ಸೂರ್ಯಕುಮಾರ್​ ಯಾದವ್ ವಿಶ್ವಕಪ್​ನಲ್ಲಿ ವೇಗದ ಫಿಫ್ಟಿ ಬಾರಿಸಿದ ಭಾರತದ 4ನೇ ಆಟಗಾರ ಮತ್ತು ಈ ಸಾಲಿನಲ್ಲಿ ಮೂರನೇ ಅರ್ಧಶತಕ ಬಾರಿಸಿದರು. ವಿರಾಟ್​ ಕೊಹ್ಲಿ ಔಟಾದ ಬಳಿಕ ಮೈದಾನಕ್ಕಿಳಿದ ಸೂರ್ಯ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕಿಳಿದರು. 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸೂರ್ಯ ವಿಶ್ವಕಪ್​ನಲ್ಲಿ ದಾಖಲೆ ಬರೆದರು.

ಕಳಪೆ ಬ್ಯಾಟಿಂಗ್​ನಿಂದಾಗಿ ವಿಶ್ವಕಪ್​ನಲ್ಲಿ ​ ಕಾದಿದ್ದ ವಿಕೇಟ್​ ಕೀಪರ್​ ರಿಷಬ್​ ಪಂತ್​ಗೆ ಜಿಂಬಾಬ್ವೆ ವಿರುದ್ಧ ಅವಕಾಶ ಮಾಡಿಕೊಡಲಾಯಿತು. ದಿನೇಶ್​ ಕಾರ್ತಿಕ್​ ಬದಲಾಗಿ ಕಣಕ್ಕಿಳಿದ ಪಂತ್​ 3 ರನ್​ ಗಳಿಸಿ ಔಟಾಗಿ ಕಳಪೆ ಆಟ ಮುಂದುವರಿಸಿದರು. ಜಿಂಬಾಬ್ವೆ ಪರವಾಗಿ ಸೀನ್​ ವಿಲಿಯಮ್ಸನ್​ 2 ವಿಕೆಟ್​ ಪಡೆದು ಮಿಂಚಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ