Mysore
20
overcast clouds
Light
Dark

ಟಿ 20 ವಿಶ್ವಕಪ್ 2024: ಯುಎಸ್‌ ಮಣಿಸಿ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಭಾರತ

ನ್ಯೂಯಾರ್ಕ್‌: ಇಲ್ಲಿನ ನಸ್ಸೌ ಕ್ರಿಕೆಟ್‌ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಟಿ 20 ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದ 25ನೇ ಪಂದ್ಯದಲ್ಲಿ ಭಾರತ ಯುಎಸ್‌ಎ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಸೂಪರ್‌ 8 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಯುಎಸ್‌ಎ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಯುಎಸ್‌ಎ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 110 ರನ್‌ ಕಲೆಹಾಕಿ ಭಾರತಕ್ಕೆ 111 ರನ್‌ಗಳ ಸುಲಭ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್‌ ಇಂಡಿಯಾ 18.2 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 111 ರನ್‌ಗಳನ್ನು ಕಲೆಹಾಕಿತು.

ಯುಎಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶಯನ್‌ ಜಹಂಗೀರ್‌ ಗೋಲ್ಡನ್‌ ಡಕ್‌ಔಟ್‌ ಆದರೆ, ಸ್ಟೀವನ್‌ ಟೇಲರ್‌ 24 ರನ್‌ ಬಾರಿಸಿದರು. ಇನ್ನುಳಿದಂತೆ ಆಂಡ್ರೀಸ್‌ ಗೌಸ್‌ 2, ಆರನ್‌ ಜೋನ್ಸ್‌ 11, ಎನ್‌ಆರ್‌ ಕುಮಾರ್‌ 27, ಕೋರಿ ಆಂಡರ್‌ಸನ್‌ 15, ಹರ್ಮೀತ್‌ ಸಿಂಗ್‌ 10, ಜಸ್‌ದೀಪ್‌ ಸಿಂಗ್‌ 2 ಮತ್ತು ವಾನ್‌ ಚಾಕ್ವಿಕ್‌ ಅಜೇಯ 11 ರನ್‌ ದಾಖಲಿಸಿದರು.

ಯುಎಸ್‌ ಬೌಲರ್‌ಗಳನ್ನು ಕಾಡಿದ ಅರ್ಷ್‌ದೀಪ್‌ ಸಿಂಗ್‌ 4 ವಿಕೆಟ್‌, ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಮತ್ತು ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.

ಟೀಮ್‌ ಇಂಡಿಯಾ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ರೋಹಿತ್‌ ಶರ್ಮಾ ಸಹ ಕೇವಲ 3 (6) ರನ್‌ ಗಳಿಸಿದರು. ರಿಷಭ್‌ ಪಂತ್‌ 18 (20) ರನ್‌ ಗಳಿಸಿದರೆ, ಸೂರ್ಯಕುಮಾರ್‌ ಯಾದವ್‌ ಅಜೇಯ 50 (49) ರನ್‌ ಮತ್ತು ಶಿವಮ್‌ ದುಬೆ 31 (35) ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಯುಎಸ್‌ ಪರ ಸೌರಭ್‌ ನೇತ್ರಾವಲ್ಕರ್‌ 2 ವಿಕೆಟ್‌ ಮತ್ತು ಅಲಿ ಖಾನ್‌ 1 ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ: ಅರ್ಷ್‌ದೀಪ್‌ ಸಿಂಗ್‌