Mysore
21
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

T20 Worldcup 2024: ಪಾಕ್‌ಗೆ ಭಾರೀ ಮುಖಭಂಗ; ಕ್ರಿಕೆಟ್‌ ಶಿಶು ಯುಎಸ್‌ ವಿರುದ್ಧ ಹೀನಾಯ ಸೋಲು

ಡಲ್ಲಾಸ್:‌ ಇಲ್ಲಿನ ಗ್ರಾಂಡ್‌ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದ 11ನೇ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಶಿಶು ಯುಎಸ್‌ಎ ವಿರುದ್ಧ ಸೋತು ತೀವ್ರ ಮುಖಭಂಗಕ್ಕೊಳಗಾಗಿದೆ. ಕೊನೆಯ ಎಸೆತದವರೆಗೂ ರೋಚಕತೆ ಹುಟ್ಟುಹಾಕಿದ್ದ ಪಂದ್ಯ ಟೈ ಆಗಿ ಬಳಿಕ ನಡೆದ ಸೂಪರ್‌ ಓವರ್‌ನಲ್ಲಿ ಯುಎಸ್‌ 5 ರನ್‌ಗಳ ಗೆಲುವನ್ನು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಯುಎಸ್‌ಎ ಫೀಲ್ಡಿಂಗ್ ಆರಿಸಿಕೊಂಡು ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆಹಾಕಿ ಯುಎಸ್‌ಎ ತಂಡಕ್ಕೆ ಸಾಧಾರಣ ಗುರಿಯನ್ನು ನೀಡಿತು. ಯುಎಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಪಂದ್ಯ ಡ್ರಾ ಆಯಿತು. ನಂತರ ನಡೆದ ಸೂಪರ್‌ ಓವರ್‌ನಲ್ಲಿ ಯುಎಸ್‌ಎ 1 ವಿಕೆಟ್‌ ನಷ್ಟಕ್ಕೆ 18 ರನ್‌ ಬಾರಿಸಿ ಪಾಕ್‌ಗೆ 19 ರನ್‌ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ 1 ವಿಕೆಟ್‌ ನಷ್ಟಕ್ಕೆ 13 ರನ್‌ ಮಾತ್ರ ಗಳಿಸಿತು.

ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಮೊಹಮ್ಮದ್‌ ರಿಜ್ವಾನ್‌ ಹಾಗೂ ನಾಯಕ ಬಾಬರ್‌ ಅಜಮ್‌ ಕಣಕ್ಕಿಳಿದರು. ರಿಜ್ವಾನ್‌ 9 ರನ್‌ ಗಳಿಸಿದರೆ, ಬಾಬರ್‌ 44 (43) ರನ್‌ ಗಳಿಸಿದರು. ಇನ್ನುಳಿದಂತೆ ಉಸ್ಮಾನ್‌ ಖಾನ್‌ 3, ಫಖರ್‌ ಜಮಾನ್‌ 11, ಅಜಮ್‌ ಖಾನ್‌ ಗೋಲ್ಡನ್‌ ಡಕ್‌ಔಟ್‌, ಇಫ್ತಿಖರ್‌ ಅಹ್ಮದ್‌ 18, ಶಾಹೀನ್‌ ಅಫ್ರಿದಿ ಅಜೇಯ 23 ಮತ್ತು ಹ್ಯಾರಿಸ್‌ ರೌಫ್‌ ಅಜೇಯ 3 ರನ್‌ ಗಳಿಸಿದರು. ತಂಡದ ಎಲ್ಲಾ ಆಟಗಾರರು ಯುಎಸ್‌ಎ ಬೌಲಿಂಗ್‌ಗೆ ಪರದಾಡುತ್ತಿದ್ದ ಸಂದರ್ಭದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶದಬ್‌ ಖಾನ್‌ 25 ಎಸೆತಗಳಲ್ಲಿ 40 ರನ್‌ ಬಾರಿಸಿ ತಂಡಕ್ಕೆ ತುಸು ಚೇತರಿಕೆಯನ್ನು ತಂದರು.

ಯುಎಸ್‌ಎ ಪರ ಕರ್ನಾಟಕ ಮೂಲದ ನೊಸ್ತುಶ್‌ ಕೆಂಜಿಗೆ 3 ವಿಕೆಟ್‌, ಸೌರಭ್‌ ನೇತ್ರಾವಲ್ಕರ್‌ 2, ಅಲಿ ಖಾನ್‌ ಮತ್ತು ಜಸ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಯುಎಸ್‌ಎ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸ್ಟೀವನ್‌ ಟೇಲರ್‌ 12 ರನ್‌ ಗಳಸಿದರೆ, ನಾಯಕ ಮೊನಾಂಕ್‌ ಪಟೇಲ್‌ 38 ಎಸೆತಗಳಲ್ಲಿ 50 ರನ್‌ ಬಾರಿಸಿ ಉತ್ತಮ ಆರಂಭ ಕಟ್ಟಿಕೊಟ್ಟರು. ಇನ್ನುಳಿದಂತೆ ಜವಾಬ್ದಾರಿಯುತ ಆಟವನ್ನಾಡಿದ ಆಂಡ್ರೀಸ್‌ ಗೌಸ್‌ 35 (26), ಆರನ್‌ ಜೋನ್ಸ್‌ ಅಜೇಯ 36 (26) ರನ್‌ ಮತ್ತು ನಿತೀಶ್‌ ಕುಮಾರ್‌ ಅಜೇಯ 14 (14) ರನ್‌ ಗಳಿಸಿದರು.

ಪಾಕಿಸ್ತಾನದ ಪರ ಮೊಹಮ್ಮದ್‌ ಆಮೀರ್‌, ನಸೀಮ್‌ ಶಾ ಮತ್ತು ಹ್ಯಾರಿಸ್‌ ರೌಫ್‌ ತಲಾ ಒಂದೊಂದು ವಿಕೆಟ್‌ ಪಡೆದರು.

 

Tags:
error: Content is protected !!