Mysore
26
haze

Social Media

ಗುರುವಾರ, 01 ಜನವರಿ 2026
Light
Dark

ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌ ಎದುರು ಸೋತ ಶ್ರೀಲಂಕಾ

ಟಿ20 ವಿಶ್ವಕಪ್ 2022 ರಲ್ಲಿ ನ್ಯೂಜಿಲೆಂಡ್ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಹೀನಾಯವಾಗಿ ಸೋಲಿಸಿದ್ದ ನ್ಯೂಜಿಲೆಂಡ್ ತಂಡ ಇದೀಗ ಶ್ರೀಲಂಕಾವನ್ನು 70 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ಗ್ಲೆನ್ ಫಿಲಿಪ್ಸ್ ಅವರ ಅಬ್ಬರದ ಶತಕ ಆದಾರದ ಮೇಲೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ಮುಂದೆ ಮಕಾಡೆ ಮಲಗುವುದರೊಂದಿಗೆ ಕೇವಲ 102 ರನ್​ಗಳಿಗೆ ಅಲೌಟ್​ ಆಯಿತು.

ಸಿಡ್ನಿಯಲ್ಲಿ ನಡೆದ ಈ ಪಂದ್ಯವು ಸೂಪರ್ -12 ಸುತ್ತಿನಲ್ಲಿ ಒಂದನೇ ಗುಂಪಿಗೆ ಬಹಳ ಮಹತ್ವದ್ದಾಗಿತ್ತು. ಈ ಗುಂಪಿನ ಕೊನೆಯ ಕೆಲವು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಹೀಗಾಗಿ ಈ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಆರಂಭಿಕ 3 ವಿಕೆಟ್​ಗಳು ಕೇವಲ 15 ರನ್​ಗಳಿಗೆ ಉರುಳಿದವು. ಆದರೆ ಆ ಬಳಿಕ ತಂಡದ ಇನ್ನಿಂಗ್ಸ್ ಕಟ್ಟಿದ ಗ್ಲೆನ್ ಫಿಲಿಪ್ಸ್ ಅಬ್ಬರದ ಶತಕ ಸಿಡಿಸುವುದರೊಂದಿಗೆ ತಂಡವನ್ನು ಈ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!