ವೇಗದ ಶತಕ ಸಿಡಿಸಿದ ಭಾರತದ 3ನೇ ಆಟಗಾರ
ಅಜೇಯ 111 ರನ್
51ಎಸೆತ
11 ಬೌಂಡರಿ
07ಸಿಕ್ಸರ್
ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ-೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಛೋಟಕ ಬ್ಯಾಟಿಂಗ್ ಮಾಡುತ್ತಿದ್ದ ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೇವಲ ೪೯ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಾಂ ಪರ ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್‌ಗಳನ್ನು ದಂಡಿಸಿದರು. ಪಂದ್ಯದಲ್ಲಿ ಅಜೇಯರಾಗಿ ಉಳಿದ ಸೂರ್ಯಕುಮಾರ್ ೫೧ ಎಸೆತಗಳಲ್ಲಿ ೧೧೧ ರನ್ ಬಾರಿಸಿದ್ದರು.
ಅದ್ಭುತ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ (ಅಜೇಯ ೧೧೧) ಅವರ ಶತಕದಿಂದಾಗಿ ನ್ಯೂಜಿಲೆಂಡ್ ವಿರುದ್ಧ ಭಾರತ ೬ ವಿಕೆಟ್ ನಷ್ಟಕ್ಕೆ ೧೯೧ ರನ್ ಪೇರಿಸಿದೆ. ಸೂರ್ಯಕುಮಾರ್ ತಮ್ಮ ಎರಡನೇ ಟಿ-೨೦ ಅಂತಾರಾಷ್ಟ್ರೀಯ ಶತಕಕ್ಕಾಗಿ ೪೯ ಎಸೆತಗಳನ್ನು ತೆಗೆದುಕೊಂಡರು. ಇದರಲ್ಲಿ ೧೧ ಬೌಂಡರಿ ಮತ್ತು ೭ ಸಿಕ್ಸರ್‌ಗಳು ಸೇರಿವೆ.
ಇನ್ನು ಟಿ-೨೦ ಕ್ರಿಕೆಟ್ ಲ್ಲಿ ಭಾರತದ ಪರ ಎರಡು ಶತಕ ಸಿಡಿಸಿದ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಭಾಜನರಾದರು. ರೋಹಿತ್ ಶರ್ಮಾ ಭಾರತದ ಪರ ವೇಗದ ಶತಕ ಸಿಡಿಸಿ ಅಗ್ರ ಬ್ಯಾಟ್ಸ್‌ಮನ್ ಆಗಿದ್ದಾರೆ. ಶ್ರೀಲಂಕಾ ವಿರುದ್ಧ ೩೫ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ನಂತರ ಸ್ಥಾನದಲ್ಲಿ ಕೆ.ಎಲ್.ರಾಹುಲ್ ಇದ್ದಾರೆ. ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ೪೬ ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಟ-೨೦ ಅಂತಾರಾಷ್ಟ್ರೀುಂ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ೧೨೨, ರೋಹಿತ್ ಶವಾ ೧೧೮, ಸೂರ್ಯಕುಮಾರ್ ಯಾದವ್ ೧೧೭ ಭಾರತ ಪರ ಅತ್ಯಧಿಕ ರನ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಟಿ-೨೦ ಅತಿಹೆಚ್ಚು ರನ್ ಗಳಿಸಿದವರು
* ೨೦೧೭ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ೧೧೮ ರನ್ (೧೦೦ ರನ್-೩೫ ಎಸೆತ)
* ಕೆ.ಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ೧೧೭ ರನ್ (೧೦೦ ರನ್-೪೬ ಎಸೆತ)
* ೨೦೨೨ ಸೂರ್ಯಕುಮಾರ್ ನ್ಯೂಜಿಲೆಂಡ್ ವಿರುದ್ಧ ೧೧೧ ರನ್ (೧೦೦ ರನ್-೪೯ ಎಸೆತ)