Mysore
23
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

IPL 2024: ಪಂಜಾಬ್‌ ವಿರುದ್ಧ ವಿರೋಚಿತ ಗೆಲುವು ದಾಖಲಿಸಿದ ಕಮಿನ್ಸ್‌ ಪಡೆ

ಮುಲ್ಲನಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಸನ್‌ ರೈಸರ್ಸ್‌ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಮಿನ್ಸ್‌ ಪಡೆ 2 ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಪೇರಿಸಿತು. ಈ ಮೊತ್ತ ಬೆನ್ನತ್ತಿದ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿ 2 ರನ್‌ಗಳ ಅಂತರದ ವಿರೋಚಿತ ಸೋಲು ಕಂಡಿತು.

ಎಸ್‌ಆರ್‌ಎಚ್‌ ಇನ್ನಿಂಗ್ಸ್‌: ಹೈದರಾಬಾದ್‌ ತಂಡಕ್ಕೆ ಈ ಬಾರಿ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕ ಟ್ರಾವಿಸ್‌ ಹೆಡ್‌ 21 ರನ್‌ಗಳಿಸಿದರೇ ಅಭಿಷೇಕ್‌ ಶರ್ಮಾ 16 ರನ್ ಗಳಿಸಿ ಔಟಾದರು. ಬಳಿಕ ಬಂದ ಭರವಸೆಯ ಆಟಗಾರ ಐಡೆನ್‌ ಮರ್ಕ್ರಾಮ್‌ ಸೊನ್ನೆ ಸುತ್ತಿ ಪೆವಿಲಿಯನ್‌ ಸೇರಿಕೊಂಡರು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ದಿಟ್ಟ ಆಟ ಪ್ರದರ್ಶಿಸಿದ ನಿತೀಶ್‌ ರೆಡ್ಡಿ, 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸ್ಫೋಟಕ ಸಿಕ್ಸರ್‌ ಸಹಾಯದಿಂದ 64 ರನ್‌ ಸಿಡಿಸಿದರು. ಉಳಿದಂತೆ ತ್ರಿಪಾಠಿ 11, ಕ್ಲಾಸೆನ್‌ 9 ಸಮದ್‌ 25 ಮತ್ತು ಶಹಬಾಜ್‌ ಅಹ್ಮದ್‌ ಅಜೇಯ 14 ರನ್‌ ಗಳಿಸಿದರು.

ಪಂಜಾಬ್ ಪರ ಅರ್ಷದೀಪ್ 4 ವಿಕೆಟ್, ಸ್ಯಾಮ್‌ ಕರನ್‌ ಹಾಗೂ ಹರ್ಷಲ್‌ ಪಟೇಲ್ ತಲಾ 2 ವಿಕೆಟ್‌ ಪಡೆದು ಮಿಂಚಿದರು.

ಪಂಜಾಬ್‌ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಆತಿಥೇಯ ಪಂಜಾಬ್‌ ಕೂಡಾ ಆರಂಭದಲ್ಲೇ ಮುಗ್ಗರಿಸಿತು. ಜಾನಿ ಬೇರ್‌ಸ್ಟೋ ಶೂನ್ಯ ಸಂಪಾದಿಸಿ ಪೆವಿಲಿಯನ್‌ ಹಾದಿ ಹಿಡಿದರು. ಪ್ರಭ್‌ಸಿಮ್ರಾನ್‌ ಸಿಂಗ್‌ 4, ನಾಯಕ ಶಿಖರ್‌ ಧವನ್‌14 ರನ್‌ ಗಳಿಸಿ ನಿರ್ಗಮಿಸಿದರು.

ಸ್ಯಾಮ್‌ ಕರನ್‌ 29 ರನ್‌ ಹಾಗೂ ಸಿಕಂದರ್‌ ರಜಾ 28 ರನ್‌ ಕಲೆಹಾಕಿ ಸ್ವಲ್ಪ ಚೇತರಿಕೆ ನೀಡಿದರು. ಜಿತೇಶ್‌ ಶರ್ಮಾ 19 ರನ್‌ಗೆ ಸುಸ್ತಾದರು. ಕಳೆದ ಪಂದ್ಯದಲ್ಲಿ ಕಮಾಲ್‌ ಮಾಡಿದ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್ ಶರ್ಮಾ ಈ ಪಂದ್ಯದಲಲ್ಲಿಯೂ ಮಿಂಚಿನ ಬ್ಯಾಟಿಂಗ್‌ ಮಾಡಿದರು. ಈ ಇಬ್ಬರು ಕ್ರಮವಾಗಿ 46 ಮತ್ತು 33 ರನ್‌ ಗಳಿಸಿ ಔಟಾಗದೇ ಉಳಿದರು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಕೊನೆಯ ಓವರ್‌ನಲ್ಲಿ ಗೆಲ್ಲಲ್ಲು 29 ರನ್‌ಗಳ ಅವಶ್ಯಕತೆಯಿತ್ತು. ಈ ಜೋಡಿ 26 ರನ್‌ ಕೆಲಹಾಕಿ 2 ರನ್‌ಗಳ ಸೋಲು ಅನುಭವಿಸಿದರು.

ಎಸ್‌ಆರ್‌ಎಚ್‌ ಪರ ಭುವನೇಶ್ವರ್‌ 2, ಕಮಿನ್ಸ್‌, ನಟರಾಜನ್‌, ನಿತೀಶ್‌ ರೆಡ್ಡಿ, ಉನಾದ್ಕಟ್‌, ಶಹಬಾಜ್‌ ಅಹ್ಮದ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags: