Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಜನರನ್ನು ಒಟ್ಟುಗೂಡಿಸುವ ವಿಷಯ ಕ್ರೀಡೆ : ರವಿಶಂಕರ್ ಗುರೂಜಿ

ಕ್ರೀಡೆ, ಕಾರ್ಪೊರೇಟ್ ಆಡಳಿತ ಮತ್ತು ಮಾನವೀಯತೆಯನ್ನು ಉತ್ತೇಜಿಸುವಲ್ಲಿ ಕ್ರೀಡೆಗಳ ಪಾತ್ರ ಮತ್ತು ನೈತಿಕತೆಯನ್ನು ಕಾಪಾಡುವ ಕುರಿತಾದ 6ನೇ ವಿಶ್ವ ಶೃಂಗಸಭೆಯನ್ನು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಜೊತೆಗೂಡಿ ವರ್ಲ್ಡ್ ಫೋರಮ್ ಫಾರ್ ಎಥಿಕ್ಸ್ ಇನ್ ಬ್ಯುಸಿನೆಸ್ ಆಯೋಜಿಸಿದೆ.  ಈ ವಿಶೇಷ ಸಂವಾದ ಕಾರ್ಯಕ್ರಮ ಅಕ್ಟೋಬರ್ 13 ಮತ್ತು 14 ರಂದು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶ್ರೀ ರವಿಶಂಕರ್ ಗುರೂಜಿ, “ಕ್ರೀಡೆಯು ಜನರನ್ನು ಒಟ್ಟುಗೂಡಿಸುವ ಒಂದು ವಿಷಯವಾಗಿದೆ. ಆದರೆ ಇಂದು ಕ್ರೀಡೆಯನ್ನು ಯುದ್ಧದಂತೆ ಆಡಲಾಗುತ್ತದೆ. ಅಲ್ಲದೆ ಕದನಗಳಂತೆ ಕ್ರೀಡೆಯನ್ನು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಟಗಾರರು ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಆಡಬೇಕು. ಹಾಗೆಯೇ ವೀಕ್ಷಕರು ಮತ್ತು ಅಭಿಮಾನಿಗಳು ಸಹ ಕ್ರೀಡಾಸ್ಪೂರ್ತಿಯ ಪ್ರಜ್ಞೆಯನ್ನು ಹೊಂದಿರಬೇಕು. ಕ್ರೀಡೆಯಲ್ಲಿ ನೈತಿಕತೆಯು ಕೇವಲ ಒಬ್ಬನು ಮಾಡಬೇಕಿರುವ ವಿಷಯವಲ್ಲ. ಇದರ ಅರಿವು ಎಲ್ಲರಿಗೂ ಬಹಳ ಮುಖ್ಯವಾಗಿದೆ ಎಂದು ಗುರೂಜಿ ತಿಳಿಸಿದರು.

ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರಣ್ ರಿಜಿಜು ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಅಗತ್ಯತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಟಗಾರರಿಗೆ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ವೃತ್ತಿ ಅವಕಾಶಗಳನ್ನು ಸೃಷ್ಟಿಸುತ್ತಾರೆ. ತರಬೇತುದಾರರು, ವ್ಯವಸ್ಥಾಪಕರು, ಕ್ರೀಡಾ ವ್ಯವಹಾರಗಳು ಮತ್ತು ಕ್ರಿಕೆಟ್ ಹೊರತಾಗಿಯ ಕ್ರೀಡೆಗಳನ್ನು ವೀಕ್ಷಕರಿಗೆ ತಲುಪಿಸುವಲ್ಲಿ ಮುಖ್ಯ ಪಾತ್ರವಹಿಸಬೇಕೆಂದು ತಿಳಿಸಿದರು.

“ಕ್ರೀಡೆ ಕೇವಲ ಆಟವಾಡುವುದಲ್ಲ. ಅದು ರಾಷ್ಟ್ರಗೀತೆಯೊಂದಿಗೆ ದೇಶಕ್ಕೆ ಗೌರವವನ್ನು ತರುತ್ತದೆ. ಅಂದರೆ ಕ್ರೀಡೆಗಳಲ್ಲಿ ನೀವು ಹಿಂಸೆಯಿಲ್ಲದೆ ಅಂತರರಾಷ್ಟ್ರೀಯ ರಂಗದಲ್ಲಿ ಗೆಲ್ಲಬಹುದು.” ಎಂದು ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್ ಹೇಳಿದರು.

ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಭಾರತೀಯ ಮಹಿಳಾ ರಾಷ್ಟ್ರೀಯ ಹಾಕಿ ತಂಡದ ನಾಯಕಿ ಶ್ರೀಮತಿ ಸವಿತಾ ಪುನಿಯಾ , ಹಾಕಿ ಆಟಗಾರ ಪಿಆರ್ ಶ್ರೀಜೇಶ್, ಬಿಲಿಯರ್ಡ್-ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ನ ಸದಸ್ಯರು ಸೇರಿದಂತೆ ಕ್ರೀಡಾ ಕ್ಷೇತ್ರದ ಅನೇಕರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ