Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ವರ್ಲ್ಡ್‌ ಕಪ್​ನಿಂದ ದಕ್ಷಿಣ ಆಫ್ರಿಕಾ ತಂಡ ಬ್ಯಾನ್​

ಬೆಂಗಳೂರು : ಕ್ರಿಕೆಟ್​ ವಿಶ್ವಕಪ್ ವಿಚಾರದಲ್ಲಿ ದುರದೃಷ್ಟ ದಕ್ಷಿಣ ಆಫ್ರಿಕಾ ತಂಡದ ಹೆಗಲೇರಿ ಕುಳಿತಿರುತ್ತದೆ. ಆ ತಂಡ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಕಪ್​ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ 2023 ರಲ್ಲಿ, ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯ ಡೋಪಿಂಗ್ ವಿರೋಧಿ ನಿಯಮಗಳನ್ನು ಅನುಸರಿಸದ ಕಾರಣ ಅವರು ಮತ್ತೊಂದು ಬಗೆಯ ಸಮಸ್ಯೆಗೆ ಸಿಲುಕಿದ ಹರಿಣಗಳ ಪಡೆ. ಕ್ರಿಕ್​ಬಜ್​ ವರದಿ ಪ್ರಕಾರ ವಾಡಾದ ನಿಯಮ ಪಾಲಿಸದ ಕಾರಣ ತಂಡಕ್ಕೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ.

ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ 2021 ರಲ್ಲಿ ತಂದ ಜಾರಿಗೆ ತಂದಿರುವ ವಾಡಾ ಸಂಹಿತೆಯನ್ನು ಕ್ರಿಕೆಟ್​ ತಂಡ ಅನುಸರಿಸಿಲ್ಲ ಎಂದು ವರದಿ ಸೂಚಿಸುತ್ತದೆ. ಇಂಥ ಘಟನೆಗಳು ಕ್ರಿಕೆಟ್ ಅನ್ನು ಒಲಿಂಪಿಕ್ಸ್ ಸ್ಪರ್ಧೆಯ ಪಟ್ಟಿಗೆ ತರಲು ಅಡಚಣೆಯನ್ನುಂಟುಮಾಡುತ್ತವೆ. ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಸಂಬಂಧಿಸಿದಂತೆ ಐಒಸಿ ಅಧಿಕಾರಿಗಳು ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ವೇಳೆಯಲ್ಲಿ ದಕ್ಷಿಣ ಆಫ್ರಿಕಾ ತಂಡ ಯಡವಟ್ಟು ಮಾಡಿಕೊಂಡಿದೆ.

ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ ಒಂದು ಪಂದ್ಯವನ್ನಾಡಿದೆ. ಅವರು 400 ಕ್ಕೂ ಹೆಚ್ಚು ರನ್ ಗಳಿಸಿದ್ದರೆ. ಬೃಹತ್​ ಅಂತರದಿಂದ ಗೆಲುವು ಸಾಧಿಸಿದೆ. ಅತ್ಯುತ್ತಮ ಆರಂಭದ ಹೊರತಾಗಿಯೂ ಮುಂದಿನ ಪಂದ್ಯಗಳಲ್ಲಿ ತಂಡದ ಭವಿಷ್ಯ ಏನಾಗಲಿದೆ ಎಂಬುದು ವಾಡಾದ ನಿರ್ಧಾರದ ಮೇಲೆ ನಿಂತಿದೆ. ವಾಡಾ ಹೇಳಿಕೆಯಲ್ಲಿ ದಕ್ಷಿಣ ಆಫ್ರಿಕಾದ ಮೇಲೆ ವಿಧಿಸಬಹುದಾದ ನಿರ್ಬಂಧಗಳನ್ನು ಪಟ್ಟಿ ಮಾಡಿದೆ.

ದಕ್ಷಿಣ ಆಫ್ರಿಕಾದ ಸಂಪೂರ್ಣ ನಿಷೇಧವನ್ನು ತಳ್ಳಿಹಾಕಲಾಗಿದೆ. ಹೀಗಾಗಿ ಹಾಲಿ ವಿಶ್ವ ಕಪ್​ನಲ್ಲಿ ತಂಡವು ಆಟವನ್ನು ಮುಂದುವರಿಸುವ ಸಾಧ್ಯತೆಗಳಿವೆ. ಆದರೆ, ವಾಡಾ ದಕ್ಷಿಣ ಆಫ್ರಿಕಾವನ್ನು ಹೇಗೆ ನಿರ್ಬಂಧಿಸಬಹುದು ಎಂಬ ಮಾಹಿತಿಯನ್ನೂ ನೀಡಿದೆ. ಎಸ್ಎಐಡಿಎಸ್ ಪುನಃಸ್ಥಾಪನೆಯಾಗುವವರೆಗೆ ಪ್ರಾದೇಶಿಕ ಖಂಡಾಂತರ ಮತ್ತು ವಿಶ್ವ ಚಾಂಪಿಯನ್​ಶಿಪ್​ಗಳು ಮತ್ತು ಪ್ರಮುಖ ಕ್ರೀಡಾಕೂಟಗಳು (ಒಲಿಂಪಿಕ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಹೊರತುಪಡಿಸಿ) ಆಯೋಜಿಸುವ ಕಾರ್ಯಕ್ರಮಗಳಲ್ಲಿ ದಕ್ಷಿಣ ಆಫ್ರಿಕಾದ ಧ್ವಜವನ್ನು ಹಾರಿಸಲು ಬಿಡುವುದಿಲ್ಲ. ಹೀಗಾಗಿ ಒಂದು ವೇಳೆ ದಕ್ಷಿಣ ಆಫ್ರಿಕಾ ವಾಡಾದ ನಿರ್ಬಂಧಕ್ಕೆ ಒಳಪಟ್ಟರೆ ಅದು ದೇಶದ ಧ್ವಜದ ಅಡಿಯಲ್ಲಿ ಆಡಲು ಸಾಧ್ಯವಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!