Mysore
24
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

t20 worldcup: ಶ್ರೀಲಂಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ದಕ್ಷಿಣ ಆಫ್ರಿಕಾ

ನ್ಯೂಯಾರ್ಕ್‌: ದಕ್ಷಿಣ ಆಫ್ರಿಕಾ ತಂಡದ ಸಂಘಟಿತ ಬೌಲಿಂಗ್‌ ದಾಳಿಗೆ ನಲುಗಿದ ಶ್ರೀಲಂಕಾ ತಂಡ ಮೂರಂಕಿ ದಾಟಲು ವಿಫಲರಾಗಿ ಟೂರ್ನಿಯ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ಇನ್ನು ಶ್ರೀಲಂಕಾ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ನಾಸೌ ಕೌಂಟಿ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 19.1 ಓವರ್‌ಗಳಲ್ಲಿ ಆಲ್‌ಔಟ್‌ ಆಗುವ ಮೂಲಕ 77 ರನ್‌ ಗಳಿಸಿ 78 ರನ್‌ಗಳ ಟಾರ್ಗೆಟ್‌ ನೀಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ್‌ ದಕ್ಷಿಣ ಆಫ್ರಿಕಾ ತಂಡ ಕೇವಲ 16.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 80 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಶ್ರೀಲಂಕಾ ಇನ್ನಿಂಗ್ಸ್‌: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡದ ಪರವಾಗಿ ನಿಸ್ಸಾಂಕ ಹಾಗೂ ಕುಶಾಲ್‌ ಮೆಂಡೀಸ್‌ ಆರಂಭಿಕರಾಗಿ ಕಣಕ್ಕಿಳಿದರು. ನಿಸ್ಸಾಂಕ 3(8) ರನ್‌ ಗಳಿಸಿದರೇ ಕುಶಾಲ್‌ ಮೆಂಡೀಸ್‌ ಬರೋಬ್ಬರಿ 30 ಎಸೆತಗಳಲ್ಲಿ ಕೇವಲ 19ರನ್‌ ಗಳಿಸಿದರು. ಮೆಂಡೀಸ್‌ ಗಳಿಸಿದ್ದೇ ತಂಡದ ಪರ ಅತಿಹೆಚ್ಚು ರನ್‌ ಆಗಿತ್ತು.

ಉಳಿದಂತೆ ಕಮಿಂದು ಮೆಂಡೀಸ್‌ 11(15)ರನ್‌, ನಾಯಕ ಹಸರಂಗ ಮತ್ತು ಸಮರವಿಕ್ರಮ ಡಕ್‌ಔಟ್‌ ಆಗಿ ಹೊರನಡೆದರು. ಅಸಲಂಕ 6(9)ರನ್‌, ಮ್ಯಾಥ್ಯೂಸ್‌ 16(16)ರನ್‌, ಶನಕ 9(10)ರನ್‌, ಪತಿರಣ ಹಾಗೂ ತುಷಾರ ಶೂನ್ಯ ಸಂಪಾದಿಸಿದರೇ ತೀಕ್ಷಣ ಔಟಾಗದೇ 7(16)ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ನೋಕಿಯೋ 4 ಓವರ್‌ ಬೌಲಿಂಗ್‌ ಮಾಡಿ, ಕೇವಲ 7ರನ್‌ ನೀಡಿ ಪ್ರಮುಖ 4 ವಿಕೆಟ್‌ ಪಡೆದು ಮಿಂಚಿದರು. ರಬಾಡ ಹಾಗೂ ಕೇಶವ್‌ ಮಹಾರಾಜ ತಲಾ 2 ವಿಕೆಟ್‌ ಪಡೆದರೆ, ಬಾರ್ಟ್ಮನ್‌ ಒಂದು ವಿಕೆಟ್‌ ಪಡೆದು ಗಮನ ಸೆಳೆದರು.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌: ಶ್ರೀಲಂಕಾ ನೀಡಿದ ಸಾದಾರಣ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ ಉಂಟಾಯಿತು. ರೀಜಾ ಹೆಂಡ್ರಿಕ್ಸ್‌ 4(2) ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು. ಬಳಿಕ ಬಂದ ನಾಯಕ ಐಡೆನ್‌ ಮಾರ್ಕ್ರಂ 12(14) ರನ್‌ ಗಳಿಸಿ ಔಟಾಗಿ ನಿರ್ಗಮಿಸಿದರು.

ಕಡಿಮೆ ಮೊತ್ತ ಬೆನ್ನತ್ತಿದರೂ ಕೂಡಾ ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಡಿಕಾಕ್‌ ಚೇತರಿಕೆ ಆಟವಾಡಿದರು. ಇವರು 20(27) ರನ್‌ ಕಲೆಹಾಕಿ ಔಟಾದರು. ಇವರಿಗೆ ಟ್ರಿಸ್ಟನ್‌ ಸ್ಟಬ್ಸ್‌ 13(28)ರನ್‌ ಕಲೆಹಾಕಿದರು.

ಕೊನೆಯಲ್ಲಿ ಅಬ್ಬರಿಸಿದ ಹೆನ್ರಿಚ್‌ ಕ್ಲಾಸೆನ್‌ ಹಾಗೂ ಡೇವಿಡ್‌ ಮಿಲ್ಲರ್‌ ತಂಡಕ್ಕೆ ಗೆಲುವು ತಂದಿಟ್ಟರು. ಕ್ಲಾಸೆನ್‌ 19(22) ರನ್‌ ಮಿಲ್ಲರ್‌ 6(6) ರನ್‌ ಬಾರಿಸಿ ಗೆಲುವಿನ ನಗೆ ಬೀರಿದರು.

ಶ್ರೀಲಂಕಾ ಪರ ವನಿಂದು ಹಸರಂಗ 2, ಶನಕ ಹಾಗೂ ತುಷಾರ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ: ಎನ್ರಿಚ್‌ ನೋಕಿಯೋ

Tags:
error: Content is protected !!