Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಭಾರತ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

ಬೆಂಗಳೂರು : ಡಿಸೆಂಬರ್‌ 10ರಿಂದ ಆರಂಭವಾಗುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ, ಟಿ20 ಮತ್ತು ಟೆಸ್ಟ್‌ ಸರಣಿಗಳಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಸೋಮವಾರ ತಂಡಗಳನ್ನು ಪ್ರಕಟ ಮಾಡಿದೆ.

ವಿಶ್ವಕಪ್‌ ನಂತರ ಭಾರತ ತಂಡದ ಮೊದಲ ಅಂತರಾಷ್ಟ್ರೀಯ ಪ್ರವಾಸ ಇದಾಗಿದ್ದು, ಸೌಥ್‌ ಆಫ್ರಿಕಾ ವಿರುದ್ಧ ಭಾರತ ತಂಡ 3 ಎಕದಿನ, 3 ಟಿ20 ಮತ್ತು 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಡಿಸೆಂಬರ್‌ 10ರಿಂದ ಆರಂಭವಾಗುವ ಸರಣಿ ಜನವರಿ 7ಕ್ಕೆ ಮುಕ್ತಾಯವಾಗಲಿದೆ.

ಮೊದಲು ನಡೆಯಲಿರುವ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿ ಮತ್ತು ಏಕದಿನ ಸರಣಿಗೆ ಮಾಡಲಾಗಿರುವ ತಂಡಗಳಿಂದ ನಾಯಕ ತೆಂಬಾ ಬವೂಮ ಮತ್ತು ಫಾಸ್ಟ್‌ ಬೌಲರ್‌ ಕಗಿಸೊ ರಬಾಡಗೆ ವಿಶ್ರಾಂತಿ ನೀಡಲಾಗಿದೆ. ಟೆಸ್ಟ್‌ ಆಡುವ ಉದ್ದೇಶದಿಂದ ಈ ಇಬ್ಬರು ಪ್ರಮುಖರಿಗೆ ವಿಶ್ರಾಂತಿ ನೀಡಲಿದ್ದು, ಮೊದಲ ಟೆಸ್ಟ್‌ಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಂದಹಾಗೆ ಟೆಸ್ಟ್‌ ತಂಡಕ್ಕೆ ಕೇಶವ್ ಮಹಾರಾಜ್ ಅವರನ್ನು ಏಕಮಾತ್ರ ಸ್ಪಿನ್ನರ್‌ ಆಗಿ ಆಯ್ಕೆ ಮಾಡಲಾಗಿದೆ. ಸೀಮಿತ ಓವರ್‌ಗಳ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಏಡೆನ್ ಮಾರ್ಕ್ರಮ್ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ತಂಡ ದ.ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ವಿಶೇಷವೆಂದರೆ ಭಾರತ ತಂಡದ ಇದುವರೆಗೂ ಸೌಥ್‌ ಆಫ್ರಿಕಾ ನೆಲದಲ್ಲಿ ಒಮ್ಮೆಯೂ ಕೂಡಾ ಟೆಸ್ಟ್‌ ಸೀರಿಸ್‌ ನಲ್ಲಿ ಗೆಲುವು ಸಾಧಿಸಿಲ್ಲ. ಹೀಗಾಗಿ ಬಿಸಿಸಿಐ ಈ ಬಾರಿ ಟೆಸ್ಟ್‌ ಕಡೆ ಹೆಚ್ಚಿನ ಒಲವು ತೋರಿದ್ದು, ಅನುಭವಿ ಆಟಗಾರರಾದ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅವರು ಟಿ20 ಮತ್ತು ಏಕದಿನ ಮಾದರಿಗೆ ಈ ಇಬ್ಬರು ಅನುಭವಿಗಳು ವಿಶ್ರಾಂತಿ ತೆಗೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ತಂಡ
ಏಡೆನ್ ಮಾರ್ಕ್ರಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಮ್ಯಾಥ್ಯೂ ಬ್ರೀಟ್ಜ್‌ಕಿ, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ (1ನೇ ಮತ್ತು 2ನೇ ಪಂದ್ಯಕ್ಕೆ), ಡೊನೊವನ್ ಫೆರೇರಾ, ರೀಝಾ ಹೆಂಡ್ರಿಕ್ಸ್, ಮಾರ್ಕೊ ಯನ್ಸೆನ್ (1ನೇ ಮತ್ತು 2ನೇ ಪಂದ್ಯಕ್ಕೆ), ಹೆನ್ರಿಚ್‌ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್‌ ಮಿಲ್ಲರ್‌, ಲುಂಗಿ ಎನ್ಗಿಡಿ (1ನೇ ಮತ್ತು 2ನೇ ಪಂದ್ಯಗಳು), ಆಂಡಿಲ್ ಫೆಹ್ಲುಕ್ವಾಯೊ, ತಬ್ರೇಜ್ ಶಾಮ್ಸಿ, ಟ್ರಿಸ್ಟನ್ ಸ್ಟಬ್ಸ್, ಲಿಝಾದ್ ವಿಲಿಯಮ್ಸ್.

ದಕ್ಷಿಣ ಆಫ್ರಿಕಾ  ಏಕದಿನ ತಂಡ
ಏಡೆನ್ ಮಾರ್ಕ್ರಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ನಾಂಡ್ರೆ ಬರ್ಗರ್, ಟೋನಿ ಡಿ ಝೋರ್ಜಿ, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೇಜ್ ಶಾಮ್ಸಿ, ರಾಸಿ ವ್ಯಾನ್ ಡೆರ್ ಡುಸೆನ್, ಕೈಲ್ ಮೇಯರ್ಸ್‌, ಲಿಝಾಡ್‌ ವಿಲಿಯಮ್ಸನ್.

ದಕ್ಷಿಣ ಆಫ್ರಿಕಾದ ಟೆಸ್ಟ್‌ ತಂಡ
ತೆಂಬಾ ಬವೂಮ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಝೊರ್ಜಿ, ಡೀನ್ ಎಲ್ಗರ್, ಮಾರ್ಕೊ ಯನ್ಸೆನ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ವಿಯಾನ್ ಮಲ್ಡರ್, ಲುಂಗಿ ಎನ್ಗಿಡಿ, ಕೀಗನ್ ಪೀಟರ್ಸನ್, ಕಗಿಸೊ ರಬಾಡ, ಟ್ರಿಸ್ಟನ್ ಸ್ಟಬ್ಸ್‌, ಕೈಲ್ ವೆರೇನ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ