Mysore
29
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ದ್ರಾವಿಡ್‌ ದಾಖಲೆ ಸರಿಗಟ್ಟಿದ ಸ್ಮಿತ್‌

ಗಾಲೆ: ಆಸ್ರೇಲಿಯಾದ ಟೆಸ್ಟ್‌ ತಂಡದ ಪ್ರಮುಖ ಆಟಗಾರ ಸ್ಟೀವ್‌ ಸ್ಮಿತ್‌ ಅಂತರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 36ನೇ ಶತಕದ ಸಾಧನೆ ಮಾಡುವ ಮೂಲಕ ರಾಹುಲ್‌ ದ್ರಾವಿಡ್‌ ಅವರ ದಾಖಲೆ ಸರಿಗಟ್ಟಿದ್ದಾರೆ.

ಗಾಲೆಯಲ್ಲಿ ಶ್ರೀಲಂಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್‌ ಸ್ಮಿತ್‌ ಶತಕದ ಸಾಧನೆ ಮಾಡುವ ಮೂಲಕ ಭಾರತದ ಮಾಜಿ ಆಟಗಾರ ರಾಹುಲ್‌ ದ್ರಾವಿಡ್‌ ಮತ್ತು ಇಂಗ್ಲೆಂಡ್‌ ತಂಡದ ಬ್ಯಾಟರ್‌ ಜೋ ರೂಟ್‌ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

116 ನೇ ಪಂದ್ಯ ಆಡುತ್ತಿರುವ (206 ಇನ್ನಿಂಗ್ಸ್)‌ ಸ್ಮಿತ್‌ 56.90ರ ಸರಾಸರಿಯಲ್ಲಿ ಒಟ್ಟು 10,243 ರನ್‌ ಪೇರಿಸಿದ್ದಾರೆ.

ಉತ್ತಮ ಲಯದಲ್ಲಿರುವ ಸ್ಟೀವ್‌ ಸ್ಮಿತ್‌, ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರ  ವೈಯುಕ್ತಿಕ ಶತಕದ ಸಾಧನೆ  ಮುರಿಯುವತ್ತ ಕಣ್ಣಿಟ್ಟಿದ್ದಾರೆ.

ದ್ವೀತಿಯ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌ನಲ್ಲಿ 257 ರನ್‌ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಪ್ರಥಮ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಎರಡನೇ ದಿನದಾಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 330 ರನ್‌ಗಳಿಸಿ 73 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

Tags:
error: Content is protected !!