Mysore
29
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

KKR ನ ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ಮರುನೇಮಕ: ಉಪನಾಯಕನಾಗಿ ರಾಣಾ

೨೦೨೪ರಲ್ಲಿ ನಡೆಯುವ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ೧೭ ನೇ ಆವೃತ್ತಿಯಲ್ಲಿ ಕೆಕೆಆರ್‌ (ಕೊಲ್ಕತ್ತಾ ನೈಟ್‌ ರೈಡರ್ಸ್‌) ತಂಡದ ನಾಯಕಾಗಿ ಶ್ರೇಯಸ್‌ ಅಯ್ಯರ್‌ ಅವರು ಮುಂದುವರೆಯಲಿದ್ದಾರೆ ಎಂದು ಕೆಕೆಆರ್‌ನ ಸಿಇಒ ವೆಂಕಿ ಮೈಸೂರು ಅವರು ಇಂದು (ಗುರುವಾರ) ಘೋಷಿಸಿದ್ದಾರೆ.

ಮಾಜಿ ನಾಯಕ ನಿತೀಶ್‌ ರಾಣಾ ಅವರು ಕೆಕೆಆರ್‌ ನ ಉಪ ನಾಯಕರಾಗಿ ನೇಮಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಇಒ ಅವರು, “ಗಾಯದ ಕಾರಣದಿಂದ ಶ್ರೇಯಸ್ ಐಪಿಎಲ್ 2023 ರ ಸೀಸನ್‌ಗೆ ಅಲಭ್ಯರಾಗಿದ್ದು ನಿಜಕ್ಕೂ ದುರದೃಷ್ಟಕರ. ಅವರು ಮತ್ತೆ ನಾಯಕನಾಗಿ ಚುಕ್ಕಾಣಿ ಹಿಡಿದಿರುವುದು ನಮಗೆ ಸಂತೋಷ ತಂದಿದೆ. ಗಾಯದಿಂದ ಚೇತರಿಸಿಕೊಳ್ಳಲು ಅವರು ಶ್ರಮಿಸಿದ ರೀತಿ ಮತ್ತು ಅವರ ಫಾರ್ಮ್ ಪ್ರದರ್ಶನಗೊಂಡಿರುವುದು ಅವರ ಶ್ರಮಕ್ಕೆ ಸಾಕ್ಷಿಯಾಗಿದೆ. ಕಳೆದ ಋತುವಿನಲ್ಲಿ ನಿತೀಶ್ ಅವರು ಶ್ರೇಯಸ್ ಅವರ ಬದಲಿಗೆ ನಾಯಕರಾಗಲು ಒಪ್ಪಿಕೊಂಡರು ಮತ್ತು ಉತ್ತಮ ಕೆಲಸ ಮಾಡಿದ್ದು, ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಉಪನಾಯಕನಾಗಿ ನಿತೀಶ್ ಅವರನ್ನು ನೇಮಕ ಮಾಡಲಾಗಿದ್ದು, ತಂಡಕ್ಕೆ ಮತ್ತು ನಾಯಕನಿಗೆ ಎಲ್ಲಾ ರೀತಿಯಲ್ಲೂ ಬೆಂಬಲಿಸುವುದರಲ್ಲಿ ಸಂದೇಹವಿಲ್ಲ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

ನಾಯಕನಾಗಿ ಮರು ನೇಮಕಗೊಂಡ ಬೆನ್ನಲ್ಲೇ ಮಾತನಾಡಿರುವ ಶ್ರೇಯಸ್‌ ಅಯ್ಯರ್‌, “ಕಳೆದ ಋತುವಿನಲ್ಲಿ ಗಾಯದ ಕಾರಣದಿಂದ ನನ್ನ ಅನುಪಸ್ಥಿತಿ ಸೇರಿದಂತೆ ತಂಡ ಹಲವಾರು ಸವಾಲುಗಳನ್ನು ಎದುರಿಸಿದೆ. ನಿತೀಶ್ ಅವರು ನನ್ನ ಸ್ಥಾನವನ್ನು ತುಂಬಲು ಮಾತ್ರವಲ್ಲದೆ ಅವರ ನಾಯಕತ್ವದಿಂದಲೂ ತಂಡಕ್ಕೆ ಉತ್ತಮ ಕೆಲಸ ಮಾಡಿರುವುದು ಶ್ಲಾಘನೀಯ. ಕೆಕೆಆರ್‌ ಅವರನ್ನು ವೈಸ್ ಕ್ಯಾಪ್ಟನ್‌ ಆಗಿ ನೇಮಿಸಿರುವುದು ನನಗೆ ಸಂತೋಷ ತಂದಿದೆ. ಇದು ನಾಯಕತ್ವದ ಗುಣವಿರುವ ಗುಂಪನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ” ಎಂದು ಅವರು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!