ನವದೆಹಲಿ: ಭಾರತ ಹಾಕಿ ತಂಡದ ಗೋಲ್ ಕೀಪರ್ ಕೇರಳದ ಶ್ರೀಜೇಶ್ ಅವರಿಗೆ ಹಾಕಿ ಇಂಡಿಯಾ ಉನ್ನತ ಹುದ್ದೆ ನೀಡಿ ಗೌರವಿಸಿದೆ.
ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಕಂಚಿನ ಪಂದ್ಯಕ್ಕಾಗಿ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮವಾಗಿ ಗೋಲ್ ಕೀಪಿಂಗ್ ಮಾಡಿ ಭಾರತ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಓಲ್ ಕೀಪರ್ ಪಿಜೆ ಶ್ರೀಜೇಶ್ ಅವರು ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಅಂತರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದರು. ಇನ್ನು ಈ ಪಂದ್ಯದಲ್ಲಿ ಭಾರತ 2-1ರ ಅಂತರಿಂದ ಸ್ಪೇನ್ ಸೋಲಿಸಿ ಕಂಚಿನ ಪದಕ್ಕೆ ಕೊರಳೊಡ್ಡಿತ್ತು.
ಪ್ಯಾರಿಸ್‌ನಲ್ಲಿ ಆಡಿದ ಪಂದ್ಯದೊಂದಿಗೆ ತಾವು ವಿದಾಯ ಘೋಷಿಸುತ್ತಿರುವುದಾಗಿ ಹೇಳಿದ ಶ್ರೀಜೇಶ್ ಅವರಿಗೆ ಹಾಕಿ ಇಂಡಿಯಾ ಬಿಗ್ ಸರ್ಪ್ರೈಸ್ ನೀಡಿದೆ.
ಭಾರತ ಪರವಾಗಿ ಒಟ್ಟು ನಾಲ್ಕು ಒಲಂಪಿಕ್ಸ್ ಆಡಿರುವ ಶ್ರೀಜೇಶ್ ಒಟ್ಟು ಎರಡು ಕಂಚಿನ ಪದಕವನ್ನು ಗೆದ್ದಿದ್ದಾರೆ. ಈ ಎಲ್ಲಾ ದಾಖಲೆ ಮಾಡಿರುವ ಶ್ರೀಜೇಶ್ ಅವರಿಗೆ ಜೂನಿಯರ್ ಪುರುಷರ ಹಾಕಿ ತಂಡ ಮುಖ್ಯ ಕೋಚ್ ಆಗಿ ನೇಮಿಸಿ ಹಾಕಿ ಇಂಡಿಯಾ ಘೋಷಿಸಿದೆ.
ಪ್ಯಾರಿಸ್ ಒಲಪಿಕ್ಸ್‌ನ ಮುಕ್ತಾಯ ಸಮಾರಂಭದಲ್ಲಿ ಧ್ವಜಧಾರಿಯಾಗಿ ಶ್ರೀಜೇಶ್ ಮುಂದೆ ಸಾಗಲಿದ್ದಾರೆ.