Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಎಂಎಸ್‌ ಧೋನಿ 43ನೇ ಹುಟ್ಟು ಹಬ್ಬ: ಕ್ಯಾಪ್ಟನ್‌ ಕೂಲ್‌ನ ಅಳಿಸಲಾಗದ 7 ದಾಖಲೆಗಳಿವು

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಜನ್ಮದಿನವಿಂದು. ಭಾರತ ತಂಡದ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡ ಇವರು ಇಂದು (ಜುಲೈ.7) 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ಟೀಂ ಇಂಡಿಯಾ ಪರವಾಗಿ 15 ವರ್ಷಗಳ ಕಾಲ ಆಟವಾಡಿರುವ ಮಹಿ, ತನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ಬರೆದಿದ್ದಾರೆ. ಜುಲೈ.7 1981ರಂದು ಜನಿಸಿದ ಧೋನಿ ಅವರು ತಮ್ಮ ಜೆರ್ಸಿ ಮೇಲೆ 7 ನಂಬರ್‌ ಹಾಖಿಸಿಕೊಂಡಿರುವ ಇವರು, ತಮ್ಮ ಸಾರ್ವಕಾಲಿಕ ಕ್ರಿಕೆಟ್‌ ಜೀವನದಲ್ಲಿ ಮುರಿಯಲಾಗದ ಧೋನಿ ಅವರ ದಾಖಲೆಗಳಿವು.

1. ಟ್ರೋಫಿ ಮಾಸ್ಟರ್‌: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐಸಿಸಿ ನಡೆಸುವ ಪ್ರತಿಷ್ಠಿತ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಸಾರ್ವಕಾಲಿಕ ದಾಖಲೆ ಎಂಎಸ್‌ ಧೋನಿ ಹೆಸರಿನಲ್ಲಿದೆ. ಎಂಎಸ್‌ ಧೋನಿ ಅವರು, 2007ರಲ್ಲಿ ಟಿ20 ವಿಶ್ವಕಪ್‌, 2011ರಲ್ಲಿ ಏಕದಿನ ವಿಶ್ವಕಪ್‌ ಹಾಗೂ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ಮೂಲಕ ಈ ದಾಖಲೆಯನ್ನು ಧೋನಿ ಬರೆದಿದ್ದಾರೆ.

2. ವಿಕೇಟ್‌ ಕೀಪರ್‌ ಆಗಿ ದಾಖಲೆ: ಎಂ ಎಸ್‌ ಧೋನಿ ವಿಕೆಟ್‌ ಕೀಪರ್‌ ಆಗಿ ಅತಿಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈಸೂಪರ್‌ ಕಿಂಗ್ಸ್‌ ಪರವಾಗಿ 148 ಕ್ಯಾಚ್‌, 42 ಸ್ಟಂಪಿಂಗ್‌ ಸಹಿತ 190 ವಿಕೆಟ್‌ ಕಬಳಿಸಿದ ದಾಖಲೆ ಬರೆದಿದ್ದಾರೆ.

3. ಏಳನೇ ಕ್ರಮಾಂಕದಲ್ಲಿ 2 ಶತಕ ದಾಖಲೆ: ಟೀಂ ಇಂಡಿಯಾ ಪರವಾಗಿ ಏಳು ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ 2 ಶತಕ ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಅವರ ಪಾಲಾಗಿದೆ. ಈ ಕ್ರಮಾಂಕದಲ್ಲಿ ಒಂದಕ್ಕಿಂತ ಹೆಚ್ಚು ಶತಕ ದಾಖಲಿಸಿದ ಏಕೈಕ ಆಟಗಾರ ಎಂ.ಎಸ್‌ ಧೋನಿ ಆಗಿದ್ದಾರೆ.

4. ಅತಿಹೆಚ್ಚು ಪಂದ್ಯಗಳಿಗೆ ನಾಯಕ: ಇನ್ನು ತಂಡವೊಂದನ್ನು ಅತಿಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕ ಎಂಬ ಹಿರಿಮೆ ಧೋನಿ ಪಾಲಾಗಿದೆ. ಅವರು ಟೀಂ ಇಂಡಿಯಾವನ್ನು 200 ಏಕದಿನ, 70 ಟೆಸ್ಟ್‌ ಹಾಗೂ 72 ಟಿ20 ಪಂದ್ಯಗಳು ಸೇರಿ 332 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಆ ಮೂಲಕ ತಂಡವೊಂದನ್ನು ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ವಿಶ್ವ ದಾಖಲೆಯನ್ನು ಧೋನಿ ಹೊಂದಿದ್ದಾರೆ.

5. ಅರ್ಧಶತಕ ದಾಖಲೆ: ಐಪಿಎಲ್‌ನಲ್ಲಿ ಐದು ವಿಭಿನ್ನ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿ ಅರ್ಧಶತಕ ದಾಖಲಿಸಿರು ಎಂಎಸ್‌ ಧೋನಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅವರು ಮೂರು, ನಾಲ್ಕು, ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.

6.ಡೆತ್‌ ಓವರ್‌ನಲ್ಲಿ ಅತಿಹೆಚ್ಚು ರನ್‌: ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಕಣಕ್ಕಿಳಿದು, 229 ಇನ್ನಿಂಗ್ಸ್‌ ನಲ್ಲಿ ಡೆಟ್‌ ಓವರ್‌ನಲ್ಲಿ 667 ರನ್‌ ಬಾರಿಸಿದ್ದಾರೆ.

7. ಅತಿಹೆಚ್ಚು ಬಾರಿ ಅಜೇಯರಾಗಿ ಉಳಿದಿರುವುದು: ಟೀಂ ಇಂಡಿಯಾದ ಬೆಸ್ಟ್‌ ಫಿನಿಷರ್‌ ಆಗಿರುವ ಧೋನಿ ಅವರು ಒಟ್ಟಾರೆಯಾಗಿ 84 ಇನ್ನಿಂಗ್ಸ್‌ನಲ್ಲಿ ನಾಟ್‌ ಔಟ್‌ ಆಗಿ ಉಳಿದು ಈ ದಾಖಲೆ ಬರೆದಿದ್ದಾರೆ.

Tags: