Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪುತ್ರಿ ಸಾರಾಗೆ ಹೊಸ ಜವಾಬ್ದಾರಿ ನೀಡಿದ ಸಚಿನ್‌ ತೆಂಡೂಲ್ಕರ್‌

ಬೆಂಗಳೂರು:  ಸಚಿನ್‌ ತೆಂಡೂಲ್ಕರ್‌ ಅವರು ಸಚಿನ್‌ ತೆಂಡೂಲ್ಕರ್‌ ಫೌಂಡೇಶನ್‌ ಡೈರೆಕ್ಟರ್‌ ಆಗಿ ಪುತ್ರಿ ಸಾರಾ ತೆಂಡೂಲ್ಕರ್‌ ಅವರನ್ನು ನೇಮಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಈ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸಾರಾ ಅವರು ಯೂನಿವರ್ಸಿಟಿ ಕಾಲೇಜು ಲಂಡನ್‌ನಿಂದ ಕ್ಲಿನಿಕಲ್‌ ಮತ್ತು ಪಬ್ಲಿಕ್‌ ಹೆಲ್ತ್‌ ನ್ಯೂಟ್ರಿಷನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕ್ರೀಡೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೂಲಕ ಭಾರತವನ್ನು ಸಶಕ್ತಗೊಳಿಸಲು ಆಕೆ ಪ್ರಯಾಣವನ್ನು ಪ್ರಾರಂಭಿಸಿದಾಗ ಜಾಗತಿಕ ಕಲಿಕೆಯು ಹೇಗೆ ಪರಿಪೂರ್ಣತೆಗೆ ತಲುಪಿದೆ ಎಂಬುದನ್ನು ನೆನಪಿಸುತ್ತದೆ ಎಂದು ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ.

ಇನ್ನು ಕಳೆದ 2019ರಲ್ಲಿ ಸಚಿನ ತೆಂಡೂಲ್ಕರ್‌ ಫೌಂಡೇಶನ್‌ನ್ನು ಸ್ಥಾಪಿಸಲಾಗಿತ್ತು. ಮುಂದಿನ ಪೀಳಿಗೆಯ ಮಕ್ಕಳಿಗೆ ಸಮಾನ ಅವಕಾಶ ನೀಡುವ ಮೂಲಕ ಹಾಗೂ ಜಗತ್ತನ್ನು ನಿರ್ಮಿಸಲು ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

 

 

Tags: