Mysore
21
broken clouds

Social Media

ಗುರುವಾರ, 13 ಮಾರ್ಚ್ 2025
Light
Dark

ಸಚಿನ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಮುಂಬೈ: 2024ನೇ ಸಾಲಿನ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಕ್ರಿಕೆಟ್ ದಂತಕಥೆ ಸಚಿನ್‌ ತೆಂಡೂಲ್ಕರ್‌ ಭಾಜನರಾಗಿದ್ದಾರೆ.

ಭಾರತ ತಂಡದ ಪರ ಒಟ್ಟು 664 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಸಚಿನ್‌ ಟೆಸ್ಟ್‌, ಏಕದಿನ, ಟಿ20 ಸೇರಿದಂತೆ ಹಲವಾರು ದಾಖಲೆಗಳು ಅವರ ಹೆಸರಿನಲ್ಲಿದೆ.

ಕ್ರಿಕೆಟ್‌ ಕ್ಷೇತ್ರಕ್ಕೆ ಅವರ ನೀಡಿದ ಕೊಡುಗೆ ಗಮನಿಸಿ, ಬಿಸಿಸಿಐ 2024ನೇ ಸಾಲಿನ ಕರ್ನಲ್‌ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡುತ್ತಿದೆ ಎಂದು ಮಂಡಳಿ ತಿಳಿಸಿದೆ.

ಸಚಿನ್‌ 200 ಟೆಸ್ಟ್‌ ಪಂದ್ಯಗಳಲ್ಲಿ 15,921 ರನ್‌ಗಳು ಹಾಗೂ 463 ಏಕದಿನ ಪಂದ್ಯಗಳಲ್ಲಿ 18,426 ರನ್‌ಗಳನ್ನು ಗಳಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಒಂದು ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ.

 

 

Tags: