ಬೆಂಗಳೂರು : ಏಕದಿನ ವಿಶ್ವಕಪ್ ಟೂರ್ನಿಯ 45ನೇ ಪಂದ್ಯದಲ್ಲಿ ಭಾರತ ಮತ್ತು ನೆದರ್‌ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ನಾಯಕ ರೊಹಿತ್ ಶರ್ಮಾ ಮತ್ತೊಂದು ಮೈಲಿಗಲ್ಲಿಗೆ ಸೇರಿದ್ದಾರೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ವಿಶೇಷ ಎರಡು ದಾಖಲೆ ಮಾಡಿದ್ದು, ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡುಲ್ಕರ್ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿಡಿ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನೆದರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಅರ್ಧ ಶತಕ ಬಾರಿಸಿರುವ ಹಿಟ್ ಮ್ಯಾನ್ ವರ್ಲ್ಡ್ ಕಪ್ ಟೂರ್ನಿಯೊಂದರಲ್ಲಿ ಸತತ ಎರಡು ಬಾರಿ 500+ ರನ್ ದಾಖಲಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ದಾಖಲೆಯನ್ನು ರೋಹಿತ್ ಶರ್ಮಾ 2019 ಮತ್ತು 2023 ರಲ್ಲಿ ಬಾರಿಸಿದ್ದಾರೆ.
ಈ ಹಿಂದೆ ಸಚಿನ್ ತೆಂಡುಲ್ಕರ್ ಅವರು 1996 ಮತ್ತು 2003 ರಲ್ಲಿ 500ಕ್ಕೂ ಅಧಿಕ ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಈ ದಾಖಲೆಯೊಂದಿಗೆ ಮತ್ತೊಂದು ದಾಖಲೆ ಹಿಟ್ ಮ್ಯಾನ್ ಹೆಸರಿಗೆ ದಾಖಲಾಗಿದೆ ಅದು ವರ್ಷವೊಂದರಲ್ಲಿ ದಾಖಲೆಯ ಸಿಕ್ಸರ್ ಗಳಿಕೆಯ ಗರಿ ರೋಹಿತ್ ಪಾಲಾಗಿದೆ. ಇದಕ್ಕೂ ಮೊದಲು 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರು 2015ರಲ್ಲಿ ಗರಿಷ್ಠ 58 ಸಿಕ್ಸರ್ ಬಾರಿಸಿದ್ದು ದಾಖಲೆಯಾಗಿತ್ತು, ಇದನ್ನು ಮುರಿದ ರೋಹಿತ್ ಶರ್ಮಾ ದಾಖಲೆಯ 60 ಸಿಕ್ಸರ್ ಸಿಡಿಸಿ ತಮ್ಮ ಹೆಸರಿಗೆ ಈ ದಾಖಲೆಯನ್ನು ನೋಂದಾಯಿಸಿಕೊಂಡಿದ್ದಾರೆ.





