Mysore
14
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

RSWS 2022 final ನಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಮುಂಬೈ : ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಲೆಜೆಂಡ್ಸ್ ಲೀಗ್ (RSWS 2022 final) ಕ್ರಿಕೆಟ್ ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಜಯಗಳಿಸಿದೆ.

ಫೈನಲ್‍ನಲ್ಲಿ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಭಾರತದ ನಮನ್ ಓಜಾ ಶತಕ ಸಿಡಿಸಿ ತಮ್ಮ ಅಬ್ಬರದಾಟ ಪ್ರದರ್ಶನದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. 196 ರನ್‍ಗಳ ಗುರಿ ಪಡೆದ ಶ್ರೀಲಂಕಾ ಲೆಜೆಂಡ್ಸ್ ಕನ್ನಡಿಗ ವಿನಯ್ ಕುಮಾರ್ ದಾಳಿಗೆ ನಲುಗಿ 162 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿದೆ.

ಶ್ರೀಲಂಕಾ ಪರ ಇಶಾನ್ ಜಯರತ್ನ ಅರ್ಧಶತಕ ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಲೆಜೆಂಡ್ಸ್ ಆಟಗಾರರ ಬೌಲಿಂಗೆ ಬೆದರಿದರು. ಪರಿಣಾಮವಾಗಿ 18.5 ಓವರ್‌ಗಳ ಅಂತ್ಯಕ್ಕೆ 162 ರನ್‍ಗೆ ಆಲೌಟ್ ಆದರು. ಭಾರತದ ಪರ ವಿನಯ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಅಭಿಮನ್ಯು ಮಿಥುನ್ 2 ಮತ್ತು ಸ್ಟುವರ್ಟ್ ಬಿನ್ನಿ, ರಾಜೇಶ್ ಪವರ್, ರಾಹುಲ್ ಶರ್ಮಾ, ಯೂಸುಫ್ ಪಠಾಣ್ ತಲಾ 1 ವಿಕೆಟ್ ಬಡಿಸಿದರು

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!