ಮುಂಬೈ: ಭಾರತ ಕ್ರಿಕೆಟ್ ತಂಡದ ಹಿಟ್ ಮ್ಯಾನ್ ಹಾಗೂ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಾಜ್ದೆಹ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನವೆಂಬರ್.15ರಂದು ರಿತಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ರೋಹಿತ್‌ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ʼಸುಸ್ವಾಗತ ಜೂನಿಯರ್ ಹಿಟ್‌ಮ್ಯಾನ್ʼ ಎಂದು ಪೋಸ್ಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ರೋಹಿತ್ ಮತ್ತು ರಿತಿಕಾ ದಂಪತಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ರೋಹಿತ್‌ಗೆ ಶುಕ್ರವಾರದಂದು ಗಂಡು ಮಗು ಜನಿಸಿದೆ ಎಂದು ಕುಟುಂಬದ ಆಪ್ತಮೂಲಗಳು ತಿಳಿಸಿವೆ.