ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ವಿಶ್ವಾದ್ಯಂತ ಹೆಚ್ಚು ಹುಟುಕಲ್ಪಟ್ಟ ಕ್ರೀಡಾಪಟುಗಳ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ ಹಾಗೂ ಲಿಯೋ ಮೆಸ್ಸಿ ಅವರನ್ನು ಭಾರತ ಕ್ರಿಕೆಡ್ ತಂಡದ ನಾಯಕ ರೊಹಿತ್ ಶರ್ಮಾ ಮತ್ತು ಕಿಂಗ್ ವಿರಾಟ್ ಕೊಹ್ಲಿ ಅವರು ಹಿಂದಿಕ್ಕಿದ್ದಾರೆ.
ಅಕ್ಟೋಬರ್ 5 ರಿಂದ ಭಾರತ ಆತಿಥ್ಯದಲ್ಲಿ ಆರಂಭವಾಗಿದ್ದ ಐಸಿಸಿ (ಇಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಏಕದಿನ ವರ್ಲ್ಡ್ ಕಪ್ ನವೆಂಬರ್ 19 ರಂದು ಅಂತ್ಯವಾಗಿತ್ತು. ಈ ಸಂದರ್ಭದಲ್ಲಿ ವಿಕಿಪೀಡಿಯಾದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ವಿಶ್ವದಾದ್ಯಂತ ಹೆಚ್ಚು ಹುಡುಕಲ್ಪಟ್ಟ ಆಟಗಾರರು ಎಂಬ ಪಟ್ಟಿಯಲ್ಲಿ ವಿರಾಟ್- ರೋಹಿತ್ ಜೋಡಿ ಮೊದಲ ಸ್ಥಾನದಲ್ಲಿದ್ದಾರೆ.
ಕ್ರಮವಾಗಿ
1. ವಿರಾಟ್ ಕೊಹ್ಲಿ – 5M+.
2. ರೋಹಿತ್ ಶರ್ಮಾ – 4.7 M+.
3. ಕ್ರಿಸ್ಟಿಯಾನೋ ರೊನಾಲ್ಡೊ – 4.4M+.
4. ಲಿಯೋ ಮೆಸ್ಸಿ – 4.3M+. ಸ್ಥಾನದಲ್ಲಿದ್ದಾರೆ.





