ನವದೆಹಲಿ: ಕಾರು ಅಪಘಾತದ ನಂತರ ಭಾರತ ತಂಡದ ವಿಕೆಟ್ ಕೀಪರ್ ಕಂ ಬ್ಯಾಟರ್ ರಿಷಭ್ ಪಂತ್ ಅವರನ್ನು ವರ್ಷದ ಪುನರಾಗಮನ ವಿಭಾಗದಲ್ಲಿ ಲಾರಿಯಸ್ ವರ್ಲ್ಡ್ ಕಂಬ್ಯಾಕ್ ಪ್ರಶಸ್ತಿ-2025ಕ್ಕೆ ನಾಮನಿರ್ದೇಶನ ಮಾಡಲಾಗಿದೆ.
2022ರ ಡಿಸೆಂಬರ್ 30 ರಂದು ದೆಹಲಿಯಿಂದ ತಮ್ಮ ಊರಿಗೆ ಹೋಗುವಾಗ ಪಂತ್ ಭೀಕರ ಅಪಘಾತಕ್ಕೆ ಒಳಗಾಗಿದ್ದರು.
ಅವರ ಮೊಣಕಾಲಿನಲ್ಲಿ ಮೂರು ಅಸ್ಥಿರಜ್ಜುಗಳನ್ನು ಪುನರ್‌ನಿರ್ಮಿಸಲು ಶಸ್ತ್ರ ಚಿಕಿತ್ಸೆಗಳು ನಡೆದ ನಂತರ, ಬೆಂಗಳೂರಿನ ಅಂತರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಂಡಿದ್ದರು.
ನಂತರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಪುನರಾಗಮನ ಮಾಡಿದ್ದರು. ಆದಾದ ಬಳಿಕ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಗಳಿಸುವ ಮೂಲಕ ಭಾರತ ತಂಡ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು.
ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ ಪ್ರಶಸ್ತಿ ಪ್ರಧಾನ ಸಮಾರಂಭ ಏಪ್ರಿಲ್ 21 ರಂದು ಮ್ಯಾಡ್ರಿಡ್‌ನಲ್ಲಿ ನಡೆಯಲಿದೆ.





