ಮುಂಬೈ: 2025ರ ಚಾಂಪಿಯನ್ಸ್ ಟ್ರೋಫಿ ಈವೆಂಟ್ ಐಸಿಸಿ ಇತಿಹಾಸದ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಆವೃತ್ತಿಯಾಗಿದೆ.
2025ರ ಫೆಬ್ರವರಿ.19ರಿಂದ ಮಾರ್ಚ್.9ರವರೆಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆಗೆ ಪಾತ್ರವಾಗಿದೆ.
ಈ ಟೂರ್ನಿ ಐಸಿಸಿ ಈವೆಂಟ್‌ಗಳಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದ ಟೂರ್ನಿಯಾಗಿ ಹೊಸ ದಾಖಲೆ ನಿರ್ಮಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಐಸಿಸಿ ಅಧ್ಯಕ್ಷ ಜಯ್ ಶಾ ಅವರು, 2025ರ ಚಾಂಪಿಯನ್ಸ್ ಟ್ರೋಫಿ ಈವೆಂಟ್ ಐಸಿಸಿ ಇತಿಹಾಸದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಆವೃತ್ತಿಯಾಗಿದೆ ಎಂದು ದೃಢಪಡಿಸಲು ಸಂತೋಷವಾಗುತ್ತಿದೆ. ಇದು 368 ಬಿಲಿಯನ್ ಜಾಗತಿಕ ವೀಕ್ಷಣಾ ನಿಮಿಷಗಳೊಂದಿಗೆ, 2017ಕ್ಕಿಂತ ಶೇಕಡಾ.19ರಷ್ಟು ಹೆಚ್ಚಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿ ಬರೋಬ್ಬರಿ 368 ಬಿಲಿಯನ್ ನಿಮಿಷಗಳ ಜಾಗತಿಕ ವೀಕ್ಷಣೆ ಕಂಡಿದೆ. ಈ ಮೂಲಕ ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡ ಆಗಿದೆ.





