Mysore
34
few clouds

Social Media

ಬುಧವಾರ, 01 ಏಪ್ರಿಲ 2026
Light
Dark

ಉದ್ಘಾಟನಾ ಪಂದ್ಯದಲ್ಲಿ ಮಿಂಚಿದ ಆರ್‌ಸಿಬಿ

ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್, ಎಸ್‌ಆರ್‌ಎಚ್ ವಿರುದ್ಧ ಭರ್ಜರಿ ಜಯ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಇನ್ನೂ ೨೬ ಎಸೆತಗಳು ಬಾಕಿ ಇರುವಂತೆ ಸುಲಭವಾಗಿ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.

೨೦೨ ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ (ಅಜೇಯ ೬೯) ಹಾಗೂ ದೇವದತ್ತ ಪಡಿಕ್ಕಲ್ (೬೧ ರನ್) ಹಾಗೂ ರಜತ್ ಪಾಟಿದಾರ್ (೩೧ ರನ್) ಅವರು ಸ್ಛೋಟಕ ಬ್ಯಾಟಿಂಗ್ ನಡೆಸಿ ೧೫.೪ ಓವರ್ಗಳಲ್ಲಿ ಪಂದ್ಯವನ್ನು ಮುಕ್ತಾಯಗೊಳಿಸಿದರು

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಎಸ್‌ಆರ್‌ಎಚ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ ೨೯ ಆಗುವಷ್ಟರಲ್ಲಿ ತಂಡದ ಪ್ರಮುಖ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಪೆವಿಲಿಯನ್ ಸೇರಿಕೊಂಡರು. ಆದರೆ, ನಂತರ ಜೊತೆಯಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸನ್ ೯೭ ರನ್‌ಗಳ ಜೊತೆಯಾಟ ಆಡಿದರು.

ಈ ವೇಳೆ ನಾಯಕ ಇಶಾನ್ ಕಿಶನ್ (೮೦ ರನ್, ೬೫, ೪ ೮) ಕಲೆಹಾಕಿ ಔಟ್ ಆದರೆ, ಹೆನ್ರಿಕ್ ಕ್ಲಾಸನ್ ಕೂಡ ೩೧ ರನ್ ಗಳಿಸಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಅನಿಕೇತ್ ವರ್ಮಾ (೪೩ ರನ್, ೬೪, ೪ ೩ ) ಸ್ಛೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು ೨೦೦ರ ಗಡಿ ದಾಟಿಸಿದರು. ಅಂತಿಮವಾಗಿ ಎಸ್‌ಆರ್‌ಎಚ್ ತಂಡವು ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೨೦೧ ರನ್ ಕಲೆಹಾಕಿತು. ಆರ್‌ಸಿಬಿ ಪರ ಅಮೋಘ ಬೌಲಿಂಗ್ ದಾಳಿ ನಡೆಸಿದ ಜೇಕಬ್ ಡಫಿ ಹಾಗೂ ರೊಮಾರಿಯೊ ಶೇಫರ್ಡ್ ತಲಾ ೩ ವಿಕೆಟ್‌ಗಳನ್ನು ಪಡೆದುಕೊಂಡರು.

 

 

Tags:
error: Content is protected !!