ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 29 ರನ್‌ಗಳ ಅಂತರದ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿ, 182 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ ತಂಡ ನಿಗದಿತ 19.4 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ 153ರನ್ ಗಳಿಸಲಷ್ಟೇ ಶಕ್ತವಾಯಿತು.
ಲಖನೌ ಇನಿಂಗ್ಸ್: ಲಖನೌ ಗೆ ನಾಯಕ ಕೆ.ಎಲ್ ರಾಹುಲ್ ಅವರಿಂದ ಮತ್ತೊಮ್ಮೆ ನಿರೀಕ್ಷಿತ ಇನಿಂಗ್ಸ್ ಕಂಡು ಬರಲಿಲ್ಲ. ರಾಹುಲ್ ಕೇವಲ 20 ರನ್ ಗಳಿಸಿ ಔಟಾದರು. ಉಳಿದ ಬ್ಯಾಟರ್‌ಗಳಿಂದ ಉತ್ತಮ ಆಟ ಕಂಡು ಬರಲಿಲ್ಲ. ಆರಂಭಿಕ ಬ್ಯಾಟರ ಕ್ವಿಂಟನ್ ಡಿಕಾಕ್ 56 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಿತ 81 ರನ್ ಸಿಡಿಸಿದರು. ತಂಡ ಒಂದೊಂದೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೂ ಮತ್ತೊಂದೆಡೆ ಸುಭದ್ರವಾಗ ನಿಂತು ಇನ್ನಿಂಗ್ಸ್ ಕಟ್ಟಿದರು. ಕಾಕ್ ನಿರ್ಗಮನದ ನಂತರ ಕೊನೆಯಲ್ಲಿ ಅಬ್ಬರಿಸಿದ ನಿಕೊಲಸ್ ಪೂರನ್ 21 ಎಸೆತಗಳಲ್ಲಿ 5 ಸಿಕ್ಸರ್ 1 ಬೌಂಡರಿ ಸಹಿತ ಅಜೇಯ 40 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಲ್ಲಿ ನೆರವಾದರು. ಉಳಿದಂತೆ ಮಾರ್ಕಸ್ ಸ್ಟೋಯನಿಸ್ 24ರನ್ ಗಳಿಸಿದರು.
ಆರ್‌ಸಿಬಿ ಪರ ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್, ಮೊಹಮ್ಮದ್ ಸಿರಾಜ್, ದಯಾಳ್ ಮತ್ತು ಟಾಪ್ಲಿ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಇನ್ನಿಂಗ್ಸ್: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಅರ್‌ಸಿಬಿಗೆ ನಾಯಕ ಫಾಫ್ ಮತ್ತು ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದರು. ಆದರೆ ವಿರಾಟ್ 22 ರನ್ ಗಳಿಸಿ ಸಿದ್ದಾರ್ಥ್‌ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. 19 ರನ್ ಗಳಿಸಿ ಆಟವಾಡುತ್ತಿದ್ದ ನಾಯಕ ಫಾಫ್ ಮುಂದಿನ ಓವರ್‌ನಲ್ಲಿಯೇ ಇಲ್ಲದ ರನ್ ಕದಿಯಲು ಹೋಗಿ ರನ್‌ಔಟ್ ಆಗಿ ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದರೇ, ಕ್ಯಾಮರೋನ್ ಗ್ರೀನ್ 9 ರನ್ ಗಳಿಸಿ ನಿರ್ಗಮಿಸಿದರು. ರಜತ್ ಪಟಿದರ್ 29, ಅನುಜ್ ರಾವತ್ 11, ದಿನೇಶ್ ಕಾರ್ತಿಕ್ 4, ಮಾಯಾಂಕ್ ಡಾಗರ್ ಸೊನ್ನೆ ಸುತ್ತಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಇಂಪ್ಯಾಕ್ಟ್ ಪ್ಲೇಯರ್ ಲೋಮ್‌ರೋರ್ ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 33 ರನ್ ಕಲೆಹಾಕಿ ಕೊಂಚ ಕಾಡಿದರು ಸಹಾ ಗೆಲುವು ತಂದುಕೊಡುವಲ್ಲಿ ವಿಫಲರಾದರು. ಉಳಿದಂತೆ ಟಾಪ್ಲಿ 3, ಸಿರಾಜ್ 12 ರನ್ ಗಳಿಸಿದರು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.
ಲಖನೌ ಪರ ಮಾಯಾಂಕ್ ಯಾದವ್ 3, ಸಿದ್ದಾರ್ಥ್, ನವೀನ್ ಉಲ್-ಹಕ್ 2, ಸಿದ್ದಾರ್ಥ್, ಸ್ಟೋಯ್ನೀಸ್ ಹಾಗೂ ಯಶ್ ಠಾಕೂರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.