Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸನ್‌ರೈಸರ್ಸ್‌ ವಿರುದ್ಧ ಆರ್‌ಸಿಬಿಗೆ ಭರ್ಜರಿ ಗೆಲುವು; ತಿಂಗಳ ಬಳಿಕ ಗೆದ್ದ ಬೆಂಗಳೂರು!

ಹೈದರಾಬಾದ್:‌ ಇಲ್ಲಿನ ರಾಜೀವ್‌ ಗಾಂಧಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ ಆವೃತ್ತಿಯ 41ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 35 ರನ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಕಲೆಹಾಕಿ ಸನ್‌ರೈಸರ್ಸ್‌ಗೆ 207 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸನ್‌ರೈಸರ್ಸ್‌ ಹೈದರಾಬಾದ್‌ ಆರ್‌ಸಿಬಿ ಬೌಲಿಂಗ್‌ ದಾಳಿಗೆ ಮಂಕಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತು. ಈ ಮೂಲಕ ಆರ್‌ಸಿಬಿ ತಿಂಗಳ ಬಳಿಕ ಗೆಲುವನ್ನು ಕಂಡಿತು. ಮಾರ್ಚ್‌ 25ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಟೂರ್ನಿಯಲ್ಲಿ ಮೊದಲ ಬಾರಿ ಹಾಗೂ ಕೊನೆಯದಾಗಿ ಗೆದ್ದಿತ್ತು.

ಆರ್‌ಸಿಬಿ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ವಿರಾಟ್‌ ಕೊಹ್ಲಿ ಹಾಗೂ ನಾಯಕ ಫಾಫ್‌ ಡು ಪ್ಲೆಸಿಸ್‌ ಆರಂಭಿಕರಾಗಿ ಕಣಕ್ಕಿಳಿದರು. ಡುಪ್ಲೆಸಿಸ್‌ 25 (12) ರನ್‌ ಗಳಿಸಿದರೆ, ಕೊಹ್ಲಿ 51 (43) ರನ್‌ ಕಲೆಹಾಕಿದರು. ರಜತ್‌ ಪಾಟಿದಾರ್‌ ಕೇವಲ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ 50 ರನ್‌ ಬಾರಿಸಿ ತಂಡದ ರನ್‌ ವೇಗವನ್ನು ಹೆಚ್ಚಿಸಿದರು. ಇನ್ನುಳಿದಂತೆ ವಿಲ್‌ ಜಾಕ್ಸ್‌ 6 (9) ರನ್‌, ಮಹಿಪಾಲ್‌ ಲೊಮ್ರೊರ್‌ 7 (4) ರನ್‌, ದಿನೇಶ್‌ ಕಾರ್ತಿಕ್‌ 11 (6) ರನ್‌, ಸ್ವಪ್ನಿಲ್ ಸಿಂಗ್‌ 12 (6) ರನ್‌ ಗಳಿಸಿದರು ಮತ್ತು ಕ್ಯಾಮೆರಾನ್‌ ಗ್ರೀನ್‌ ಅಜೇಯ 37 (20) ರನ್‌ ಕಲೆಹಾಕಿದರು.

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಜಯದೇವ್‌ ಉನಾದ್ಕತ್‌ 3 ವಿಕೆಟ್‌, ಟಿ ನಟರಾಜನ್‌ 2 ವಿಕೆಟ್‌, ಪ್ಯಾಟ್ ಕಮಿನ್ಸ್‌ ಹಾಗೂ ಮಯಾಂಕ್‌ ಮಾರ್ಕಂಡೆ ತಲಾ ಒಂದೊಂದು ವಿಕೆಟ್‌ ಪಡೆದರು.

ಎಸ್‌ಆರ್‌ಹೆಚ್‌ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ ಕಣಕ್ಕಿಳಿದರು. ಅಭಿಷೇಕ್‌ ಶರ್ಮಾ 31 (13) ರನ್‌ ಬಾರಿಸಿದರೆ, ಈ ಹಿಂದಿನ ಪಂದ್ಯಗಳಲ್ಲಿ ಅಬ್ಬರಿಸಿದ್ದ ಹೆಡ್‌ ಕೇವಲ 1 (3) ರನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನುಳಿದಂತೆ ಏಡನ್‌ ಮಾರ್ಕ್ರಮ್‌ 7 (8) ರನ್‌, ನಿತೀಶ್‌ ರೆಡ್ಡಿ 13 (13) ರನ್‌, ಹೆನ್ರಿಚ್‌ ಕ್ಲಾಸೆನ್‌ 7 (3) ರನ್‌, ಅಬ್ದುಲ್‌ ಸಮದ್‌ 10 (6) ರನ್‌, ನಾಯಕ ಪ್ಯಾಟ್‌ ಕಮಿನ್ಸ್‌ 31 (15) ರನ್‌, ಭುವನೇಶ್ವರ್‌ ಕುಮಾರ್‌ 13 (13) ರನ್‌, ಜಯದೇವ್‌ ಉನಾದ್ಕತ್‌ ಅಜೇಯ 8 (10) ರನ್‌ ಮತ್ತು ಶಹಬಾಜ್‌ ಅಹ್ಮದ್‌ ಅಜೇಯ 40 (37) ರನ್‌ ಗಳಿಸಿದರು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಕ್ಯಾಮೆರಾನ್‌ ಗ್ರೀನ್‌, ಕರ್ಣ್‌ ಶರ್ಮಾ ಹಾಗೂ ಸ್ವಪ್ನಿಲ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರು. ವಿಲ್‌ ಜಾಕ್ಸ್‌ ಹಾಗೂ ಯಶ್‌ ದಯಾಳ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags: