ಬೆಂಗಳೂರು : ತವರು ಮೈದಾನದಲ್ಲಿ ಅಬ್ಬರದ ಆರಂಭ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ. ಮಧ್ಯಮ ಓವರ್‌ಗಳಲ್ಲಿ ಮೇಲುಗೈ ಸಾಧಿಸಿದ ಡೆಲ್ಲಿ ಬೌಲರ್‌ಗಳು, ಮೇಲಿಂದ ಮೇಲೆ ಆರ್‌ಸಿಬಿ ವಿಕೆಟ್ ಕಿತ್ತು ರನ್ ವೇಗಕ್ಕೆ ಬ್ರೇಕ್ ಹಾಕಿದರು.
ಅಂತಿಮವಾಗಿ ಫಾಫ್ ಬಳಗವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ. ಆ ಮೂಲಕ ಡೆಲ್ಲಿ ಗೆಲುವಿಗೆ 175 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 34 ಎಸೆತದಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಮೂಲಕ ಆಕರ್ಷಕ 50 ರನ್ ಗಳಿಸಿದರು. ಉಳದಂತೆ ನಾಯಕ ಫಾಫ್ ಡುಪ್ಲೇಸಿಸ್ 22 ರನ್, ಮಹಿಪಾಲ್ ಲೊಮ್ರೋರ್ 26 ರನ್, ಗ್ಲೇನ್ ಮ್ಯಾಕ್ಸ್ವೆಲ್ 24 ರನ್, ಹರ್ಷಲ್ ಪಟೇಲ್ 6 ರನ್, ದಿನೇಶ್ ಕಾರ್ತಿಕ್ ಶೂನ್ಯ, ಅನುಜ್ ರಾವತ್ 15 ರನ್ ಮತ್ತು ಶಹಬಾಜ್ ಅಹ್ಮದ್ 18 ರನ್ ಗಳಿಸಿದರು.