Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

IPL 2024: ಪಂಜಾಬ್‌ ಕಿಂಗ್ಸ್‌ ವಿರುದ್ಧ ಗೆದ್ದ ಚಾಲೆಂಜರ್ಸ್‌: ಆರ್‌ಸಿಬಿ ಪ್ಲೇ ಆಫ್‌ ಕನಸು ಇನ್ನೂ ಜೀವಂತ!

ಧರ್ಮಶಾಲಾ: ಇಲ್ಲಿನ ಹಿಮಾಚಲ್‌ ಪ್ರದೇಶ್‌ ಕ್ರಿಕೆಟ್‌ ಅಸೋಷಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಆರ್‌ಸಿಬಿ 60 ರನ್‌ಗಳ ಅಂತರದ ಗೆಲುವು ದಾಖಲಿಸಿದೆ. ಆ ಮೂಲಕ ಈ ಸೀಸನ್‌ನಲ್ಲಿ ಆರ್‌ಸಿಬಿ ಪ್ಲೇ ಆಫ್‌ಗೆ ಹೋಗುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಅವರ ಅರ್ಧಶತಕ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 241 ರನ್‌ ಕಲೆ ಹಾಕಿತು. ಈ ಬೃಹತ್‌ ಮೊತ್ತ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ 17 ಓವರ್‌ಗಳಲ್ಲಿ ಆಲ್‌ಔಟ್‌ ಆಗಿ ಕೇವಲ 181 ರನ್‌ ಗಳಿಸಿ ತವರಿನಂಗಳದಲ್ಲಿ 60 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು.

ಆರ್‌ಸಿಬಿ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿಗೆ ಆರಂಭಿಕ ಆಘಾತ ಉಂಟಾಯಿತು. ಕನ್ನಡಿಗ ವಿದ್ವತ್‌ ಕಾವೇರಪ್ಪ ಆರ್‌ಸಿಬಿ ಬ್ಯಾಟರ್‌ಗಳನ್ನು ಕಾಡಿದರು. ನಾಯಕ ಫಾಫ್‌ 9(7) ಅವರನ್ನು ಔಟ್‌ ಮಾಡುವ ಮೂಲಕ ಐಪಿಎಲ್‌ನಲ್ಲಿ ಪಾದಾರ್ಪಣ ಪಂದ್ಯದಲ್ಲಿ ಮೊದಲ ವಿಕೆಟ್‌ ಕಬಳಿಸಿದರು. ಬಳಿಕ ಬಂದ ವಿಲ್‌ ಜಾಕ್‌ 12(7) ಕೂಡಾ ಕಾವೇರಪ್ಪಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಉಳಿದಂತೆ ರಜತ್‌ ಪಟಿದರ್‌ 55(23), ಕ್ಯಾಮರೋನ್‌ ಗ್ರೀನ್‌ 46(27), ದಿನೇಶ್‌ ಕಾರ್ತಿಕ್‌ 18(7) ಲೋಮರೋರ್‌ ಶೂನ್ಯ, ಸ್ವಪ್ನಿಲ್‌ ಓಟಾಗದೇ 1(1) ರನ್‌ ಗಳಿಸಿದರು.

ಇತ್ತ ಆರಂಭದಿಂದಲೇ ಅಟ್ಯಾಕಿಂಗ್‌ ಆಟ ಆಡಿದ ವಿರಾಟ್‌ ಕೊಹ್ಲಿ 47 ಎಸೆತ ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 92 ರನ್‌ ಕಲೆಹಾಕಿ ತಂಡದ ಮೊತ್ತ ಇನ್ನೂರರ ಗಡಿ ದಾಟಲು ಸಹಕರಿಸಿದರು.

ಪಂಜಾಬ್‌ ಪರ ಹರ್ಷಲ್‌ ಪಟೇಲ್‌ 3, ವಿದ್ವತ್‌ ಕಾವೇರಪ್ಪ 2, ನಾಯಕ ಕರನ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂಜಾಬ್‌ ಇನ್ನಿಂಗ್ಸ್‌: ಆರ್‌ಸಿಬಿ ನೀಡಿದ ಬೃಹತ್‌ ಮೊತ್ತ ಬೆನ್ನತ್ತಿದ ಪಂಜಾಬ್‌ ಕಿಂಗ್ಸ್‌ಗೆ ಬ್ಯಾಟರ್‌ಗಳು ಕೈಕೊಟ್ಟರು. ಪಂಜಾಬ್‌ ಪರ ರಿಲ್ಲಿ ರೂಸೋ 61 (27 ಎಸೆತ, 9ಬೌಂಡರಿ 3ಸಿಕ್ಸರ್‌) ಹಾಗೂ ಶಶಾಂಕ್‌ ಸಿಂಗ್‌ 37(19) ಹೊರತುಪಡಿಸಿ ಬೇರಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ.

ಉಳಿದಂತೆ ಪಂಜಾಬ್‌ ಪರ ಪ್ರಭ್‌ಸಿಮ್ರಾನ್‌ 6(4), ಬೇರ್‌ಸ್ಟೋ 27(16), ಜಿತೇಶ್‌ ಶರ್ಮಾ 5(4), ನಾಯಕ ಕರನ್‌ 22(16), ಅಶುತೋಷ್‌ ಶರ್ಮಾ 8(5), ಹರ್ಷಲ್‌ ಪಟೇಲ್‌ ಶೂನ್ಯ, ರಾಹುಲ್‌ ಚಾಹರ್‌ 5(5) ಅರ್ಷ್‌ದೀಪ್‌ ಸಿಂಗ್‌ 4(3) ರನ್‌ಗಳಿಸಿ ತಂಡದ ಸೋಲಿಗೆ ಕಾರಣರಾದರು.

ಆರ್ಸಿಬಿ ಪರ ಮೊಹಮ್ಮದ್‌ ಸಿರಾಜ್‌ 3, ಸ್ವಪ್ನಿಲ್‌, ಫರ್ಗೂಸನ್‌ ಹಾಗೂ ಕರಣ್‌ ಶರ್ಮಾ ತಲಾ ಎರಡೆರೆಡು ವಿಕೆಟ್‌ ಪಡೆದರು.

Tags: