ಹುಬ್ಬಳ್ಳಿ: ಇಲ್ಲಿನ ಡಿ.ಆರ್ ಬೇಂದ್ರೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ೭ ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೧೫೨ ರನ್ ಗಳಿಗೆ ಆಲ್‌ಔಟ್ ಆಯಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ೫೧೪ರನ್ ಬಾರಿಸಿ ಡಿಕ್ಲೇರ್ ತೆಗೆದುಕೊಂಡು ದೊಡ್ಡ ಮೊತ್ತ ಕಲೆಹಾಕಿ, ಎರಡನೇ ಇನ್ನಿಂಗ್ಸ್ ಪಂಜಾಬ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದ ಪಂಜಾಬ್ ೪೧೩ ರನ್ ಕಲೆಹಾಕಿ ಕರ್ನಾಟಕಕ್ಕೆ ಕೇವಲ ೫೨ ರನ್‌ಗಳ ಗುರಿ ನೀಡಿತು. ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ ೩ ವಿಕೆಟ್ ಕಳೆದುಕೊಂಡು ಗೆದ್ದು ಬೀಗಿತು.
ಪಂಜಾಬ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ೧೫೨ ರನ್‌ಗಳಿಗೆ ಆಲ್‌ಔಟ್ ಆಯಿತು. ಕರ್ನಾಟಕ ಪರ ವಿ ಕೌಶಿಕ್ ೪೧ ರನ್ ನೀಡಿ ೭ ವಿಕೆಟ್ ಪಡೆದು ಮಿಂಚಿದರು. ನೆಹಾಲ್ ವಧೇರಾ ೪೪ ರನ್ ಗಳಿಸಿದ್ದೇ ಪಂಜಾಬ್ ಪರ ವಯಕ್ತಿಕ ಗರಿಷ್ಠ ರನ್ ಆಗಿತ್ತು.
ಕರ್ನಾಟಕ ತನ್ನ ಮೊಲದ ಇನ್ನಿಂಗ್ಸ್‌ನಲ್ಲಿ ೮ ವಿಕೆಟ್ ಕಳೆದುಕೊಂಡು ೫೧೪ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಕರ್ನಾಟಕ ಪರ ದೇವ್‌ದತ್ತ ಪಡಿಕ್ಕಲ್ ೨೧೬ ಎಸೆತಗಳಲ್ಲಿ ೨೪ ಬೌಂಡರಿ ಮತ್ತು ೪ ಸಿಕ್ಸರ್ ಸೇರಿ ೧೯೩ ರನ್ ಬಾರಿಸಿ ಔಟಾದರು. ಇವರಿಗೆ ಸಾಥ್ ನೀಡಿದ ಮನೀಶ್ ಪಾಂಡೆ ೧೬೫ ಎಸೆತಗಳಲ್ಲಿ ೧೩ ಬೌಂಡರಿ ಮತ್ತು ೩ ಸಿಕ್ಸರ್ ಸಹಿತ ೧೧೮ ರನ್‌ಗಳಿದರು. ಶರತ್ ೭೬ ರನ್ ಬಾರಿಸಿ ೩೬೨ ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.
ಇನ್ನು ಕರ್ನಾಟಕ ನೀಡಿದ್ದ ೩೬೨ ರನ್‌ಗಳ ಮುನ್ನಡೆಯನ್ನು ಚೇಸ್ ಮಾಡಲು ಹೋದ ಪಂಜಾಬ್ ಈ ಬಾರಿ ದಿಟ್ಟ ಹೋರಾಟ ನೀಡಿತು. ಪ್ರಭ್ ಸಿಮ್ರಾನ್ ಸಿಂಗ್ ೧೦೦, ಅಭಿಶೇಕ್ ಶರ್ಮಾ ೯೧ ರನ್‌ಗಳಿಂದ ೪೧೩ ರನ್ ಬಾರಿಸಿ ಸರ್ವಪತನ ಕಂಡಿತು. ಮತ್ತು ಕರ್ನಾಟಕಕ್ಕೆ ೫೧ ರನ್‌ಗಳ ಗುರಿ ನೀಡಿತು. ಕರ್ನಾಟಕ ಪರ ರೋಹಿತ್ ಕುಮಾರ್ ಮತ್ತು ಶುಭಾಂಗ್ ಹೆಗ್ಡೆ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ೩ ವಿಕೆಟ್ ಕಳೆದುಕೊಂಡು ೫೨ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಪಂದ್ಯದ ಸಾರಾಂಶ:
ದಿನ 1: ಇನ್ನಿಂಗ್ಸ್ ಬ್ರೇಕ್ – ಪಂಜಾಬ್ – 152/10 (46.5 ಓವರ್)
ದಿನ 1: ಸ್ಟಂಪ್ಸ್ – ಕರ್ನಾಟಕ – 142/3 (33.0 ಓವರ್) 10 ರನ್ ಟ್ರಯಲ್, ದೇವದತ್ ಪಡಿಕ್ಕಲ್ 80 (80), ಮನೀಶ್ ಪಾಂಡೆ 13 (22)
ದಿನ 2: ಸ್ಟಂಪ್ಸ್ – ಕರ್ನಾಟಕ – 461/6 (123), ವಿಜಯ್ ಕುಮಾರ್ ವೈಶಾಕ್ 15(27), ಶ್ರೀನಿವಾಸ್ ಶರತ್ 55 (158), 309 ರನ್ ಮುನ್ನಡೆ
ದಿನ 3: ಇನ್ನಿಂಗ್ಸ್ ಬ್ರೇಕ್ – ಕರ್ನಾಟಕ – 514/8 ಡಿ (140) 362 ರನ್ ಮುನ್ನಡೆ
ದಿನ 3: ಸ್ಟಂಪ್ಸ್ – ಪಂಜಾಬ್ – 152 ಮತ್ತು 238/3 (68) 124 ರನ್‌ಗಳ ಹಿಂದೆ, ಮನ್‌ದೀಪ್ ಸಿಂಗ್ 15 (61), ನೆಹಾಲ್ ವಧೇರಾ 9 (35)
ದಿನ 4: 1 ನೇ ಸೆಷನ್ – ಪಂಜಾಬ್ – 152 & 285/5 (84), ಗೀತಾಂಶ್ ಖೇರಾ 11(13), ಪ್ರೇರಿತ್ ದತ್ತಾ 0(4), 77 ರನ್‌ಗಳಿಂದ ಹಿನ್ನಡೆ
ದಿನ 4: ಇನ್ನಿಂಗ್ಸ್ ಬ್ರೇಕ್ – ಪಂಜಾಬ್ – 152 & 413 ಆಲ್ ಔಟ್ (114.4), 51 ರನ್ ಮುನ್ನಡೆ
ದಿನ 4: 3 ನೇ ಅಧಿವೇಶನ – ಕರ್ನಾಟಕ – 514/8 d & 52/3 (17)
ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್‌ಗಳ ಜಯ





