Mysore
20
overcast clouds
Light
Dark

Ranji trophy-2024: ಪಡಿಕ್ಕಲ್‌ ಶತಕದಾಟ; ಮೊದಲ ದಿನದಾಟದಂತ್ಯಕ್ಕೆ ಕರ್ನಾಟಕ 288/5

ಚೆನ್ನೈ: ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2024 ರ ʼಗ್ರೂಪ್‌ ಸಿʼ ಯ ಟಾಪ್‌ ತಂಡಗಳಾದ ಕರ್ನಾಟಕ ಮತ್ತು ತಮಿಳುನಾಡು ಪಂದ್ಯದಲ್ಲಿ ಕರ್ನಾಟಕ ತಂಡ ದೆವ್‌ದತ್‌ ಪಡಿಕ್ಕಲ್‌ ಅವರ ಅಮೊಘ ಶತಕದ ಬಲದಿಂದಾಗಿ ಮೊಲದ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 288 ಗಳಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಉತ್ತಮ ಆರಂಭ ಪಡೆಯಿತು. ಮಯಾಂಕ್‌ ಅಗರ್ವಾಲ್‌ ಕೇವಲ (20) ರನ್‌ ಗಳಿಸಿ ನಿರ್ಗಮಿಸಿದರು. ನಂತರ ಬಂದ ಎಡಗೈ ದಾಂಡಿಗ ದೇವ್‌ದತ್‌ ಪಡಿಕ್ಕಲ್‌ ಆರ್‌. ಸಮರ್ಥ್‌ ಜೊತೆಗೂಡಿ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಆರ್‌. ಸಮರ್ಥ್‌ (57) ರನ್‌ ಬಾರಿಸಿದರು. ಇತ್ತ ಏಕಾಂಗಿಯಾಗಿ ಇನ್ನಿಂಗ್ಸ್‌ ಕಟ್ಟಿದ ಪಡಿಕ್ಕಲ್‌ 216 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ ಸಹಿತ 151 ರನ್‌ ಗಳಿಸಿ ಆಟವನ್ನು ಕಾಯ್ದಿರಿಸಿದ್ದಾರೆ. ಇವರಿಗೆ ಜೊತೆಯಾಗಿ ಹಾರ್ದಿಕ್‌ ರಾಜ್‌ (35) ರನ್‌ ಬಾರಿಸಿ ಸ್ಕ್ರೀಜ್‌ ನಲ್ಲಿದ್ದಾರೆ.

ಇತ್ತ ತಮಿಳುನಾಡು ತಂಡದ ನಾಯಕ ಸಾಯ್‌ ಕಿಶೋರ್‌ 94/3 ಮತ್ತು ಅಜಿತ್‌ ರಾಮ್‌ 53/2 ವಿಕೆಟ್‌ ಪಡೆದಿದ್ದಾರೆ.

ರಣಜಿ ಟ್ರೋಫಿ 2024 ರ ʼಗ್ರೂಪ್‌ ಸಿʼ ಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ತಲಾ 21 ಪಾಯಿಂಟ್‌ಗಳೊಂದಿಗೆ ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ತಮಿಳುನಾಡು ರನ್‌ ರೇಟ್‌ ನಿಂದಾಗಿ ಗ್ರೂಪ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಎರಡು ತಂಡಗಳು ತಲಾ ಐದು ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಗೆದ್ದು, ಒಂದು ಸೋಲು ಮತ್ತು ಒಂದು ಡ್ರಾ ನೊಂದಿಗೆ ಅಂತ್ಯಗೊಂಡಿದೆ.

ಈ ಪಂದ್ಯದಲ್ಲಿ ಗೆದ್ದ ತಂಡ ʼಸಿʼ ಗ್ರೂಪ್‌ನಲ್ಲಿ ಅಗ್ರಸ್ಥಾನಕ್ಕೇರಲಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ