Mysore
26
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ರಣಜಿ: ಛತ್ತೀಸಗಢದ ವಿರುದ್ಧ ಕರ್ನಾಟಕಕ್ಕೆ ಜಯ

cricket

ಬೆಂಗಳೂರು:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯತ್ತಿರುವ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ  ಆತಿಥೇಯ ಕರ್ನಾಟಕ ತಂಡವು ಛತ್ತೀಸಗಢದ ವಿರುದ್ಧ ಜಯಗಳಿಸಲು ಏಳು ವಿಕಟ್‌ ಗಳ ಅಂತರದಿಂದ ಜಯ ಗಳಿಸಿದೆ.

ಮೂರನೇ ದಿನದಾಟದ ಕೊನೆಗೆ ಎರಡು ವಿಕೆಟ್‌ಗಳಿಗೆ 35 ರನ್‌ ಗಳಿಸಿದ್ದ ಛತ್ತೀಸಗಢ ತಂಡವು ಪಂದ್ಯದ ಕೊನೆಯ ದಿನವಾದ ಶುಕ್ರವಾರ ಎರಡನೇ ಇನಿಂಗ್ಸ್‌ನಲ್ಲಿ 77.5 ಓವರ್‌ಗಳಲ್ಲಿ 177 ರನ್ ಗಳಿಸಿ ಆಲೌಟ್‌ ಆಯಿತು.  ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗಳ ಅಲ್ಪಮುನ್ನಡೆ ಸಾಧಿಸಿದ್ದ ಕರ್ನಾಟಕ ತಂಡವು ಮೂರು ವಿಕೆಟ್‌ ಕಳೆದುಕೊಂಡು 128 ರನ್‌ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.

ಎರಡನೇ ಇನ್ನಿಂಗ್ಸ್‌ ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಆರ್.‌ ರವಿಕುಮಾರ್‌  ೨೪ ರನ್‌ ಗಳಿಸಿ ರನ್‌ ಔಟ್‌ ಬಲೆಗೆ ಬಿದ್ದರು. ಕಳೆದ ಪಂದ್ಯದ ಶತಕವೀರ ಮಾಯಾಂಕ್‌ ಅಗರವಾಲ್‌ 14 ರನ್‌  ಗಳಿಸಿ ಔಟಾದರು. ಆದರೆ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಿಕಿನ್‌ ಜೋಶ್‌  ಬಿರುಸಿನ ಅಜೇಯ 44   ರನ್‌ ಗಳಿಸಿ ಗೆಲುವನ್ನು ಖಾತರಿ ಪಡಿಸಿದರು.  ಮನೀಶ್‌ ಪಾಂಡೆ  24 ಬಾಲ್‌ ಗಳಿಗೆ  27 ರನ್‌ ಗಳಿಸಿ ಕ್ಯಾಚಿತ್ತು ಆಟವಾಡಿದರು. ಕೃಷ್ಣಪ್ಪ ಗೌತಮ್‌ ಎರಡು ರನ್‌ ಬಾರಿಸಿ ಗೆಲುವಿನ ಪಾಲದಾರರಾದರು.

ಶುಕ್ರವಾರ ಬೆಳಗ್ಗಿನ ಅವಧಿಯಲ್ಲಿ ಕರ್ನಾಟಕದ ಮಧ್ಯಮವೇಗಿ ವೈಶಾಖ ವಿಜಯಕುಮಾರ್ (59ಕ್ಕೆ5) ಉತ್ತಮ ಬೌಲಿಂಗ್ ಮಾಡಿ ಛತ್ತೀಸಗಢ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ಪ್ರವಾಸಿ ತಂಡದ ಅಮನದೀಪ್ ಖರೆ (50; 111ಎ) ಮತ್ತು ಮಯಂಕ್ ವರ್ಮಾ (46; 128ಎ) ಅವರು ಇನಿಂಗ್ಸ್‌ ಬೆಳೆಸಲು ಪ್ರಯತ್ನಿಸಿದರು. ಆದರೆ, ಚಹಾ ವಿರಾಮಕ್ಕೆ ಇನ್ನೂ ಕೆಲವು ನಿಮಿಷಗಳು ಬಾಕಿಯಿರುವಾಗಲೇ ಛತ್ತೀಸಗಢ ಆಲೌಟ್ ಆಯಿತು.

ಕರ್ನಾಟಕದ ಆಫ್‌ಸ್ಪಿನ್ನರ್ ಕೆ. ಗೌತಮ್ ಎರಡು, ಶ್ರೇಯಸ್ ಗೋಪಾಲ್, ವಿದ್ವತ್ ಕಾವೇರಪ್ಪ ಹಾಗೂ ವಿ. ಕೌಶಿಕ್ ತಲಾ ಒಂದು ವಿಕೆಟ್ ಗಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!