Mysore
26
broken clouds

Social Media

ಭಾನುವಾರ, 25 ಜನವರಿ 2026
Light
Dark

ರ‍್ಯಾಲಿ ಆಫ್‌ ಚಿಕ್ಕಮಗಳೂರು : ಎನ್.ಮಹಶ್ವೇರನ್‌ಗೆ ಗೆಲವು

Rally of Chikkamagaluru

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ನಡೆದ 2025ರ ರ‍್ಯಾಲಿ ಆಫ್ ಚಿಕ್ಕಮಗಳೂರು INTSDRC-1ರಲ್ಲಿ ಎನ್‌.ಮಹೇಶ್ವರನ್ ಮತ್ತು ಸಹ-ಚಾಲಕ ಪ್ರಕಾಶ್ ಮುತ್ತುಸಾಮಿ ಅವರು ಅಸಾಧಾರಣ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು.

ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಆಯೋಜಿಸಿದ ಭಾರತೀಯ ನ್ಯಾಷನಲ್ ಟೈಮ್ ಸ್ಪೀಡ್ ಡಿಸ್ಟನ್ಸ್ ರ‍್ಯಾಲಿ ಚಾಂಪಿಯನ್‌ಶಿಪ್ (4W) 2025ರ ಮೊದಲ ಅರ್ಹತಾ ಸುತ್ತಾಗಿ ಈ ರ್ಯಾಲಿ ನಡೆಯಿತು. ಒಟ್ಟು ಎಂಟು ವಿಭಾಗಗಳಲ್ಲಿ 130ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ ಈ ಸುತ್ತು, ಚಾಂಪಿಯನ್‌ಶಿಪ್ ಇತಿಹಾಸದಲ್ಲೇ ಗರಿಷ್ಠ ಭಾಗವಹಿಸುವಿಕೆಯನ್ನು ದಾಖಲಿಸಿದೆ.

ಇತರ ವಿಭಾಗಗಳ ವಿಜೇತರಲ್ಲಿ ಎ.ವಿನೋದ್ (INTSDRC-2), ಅಪರ್ಣಾ ಪಠಕ್ (ಮಹಿಳಾ ಮತ್ತು ಕರ್ನಾಟಕ ರಾಜ್ಯ ವಿಭಾಗಗಳು), ವಿನಯ್ ಪ್ರಸನ್ನ (ಪ್ರೋ ಸ್ಟಾಕ್), ಭವಾನಿ ಬಾಲಕೃಷ್ಣನ್ (ಕಪಲ್ ಮತ್ತು ಸೂಪರ್ ಕಾರ್ ವಿಭಾಗಗಳು) ಸೇರಿದ್ದರು.

INTSDRC-1 ವಿಭಾಗದಲ್ಲಿ, ಮಹೇಶ್ವರನ್ ಎನ್ ಮತ್ತು ಪ್ರಕಾಶ್ ಮುತ್ತುಸ್ವಾಮಿ ಪ್ರಥಮ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿದ್ದ ತಂಡಕ್ಕಿಂತ ಸುಮಾರು ಒಂದು ನಿಮಿಷ ಮುನ್ನಡೆಯಿದ್ದರು. ಸಂತೋಷ್ ಕುಮಾರ್ ವಿ ಮತ್ತು ಟಿ. ನಾಗರಾಜನ್ ಎರಡನೇ ಸ್ಥಾನದಲ್ಲಿದ್ದು, ಗಣೇಶ್ ಮೂರ್ತಿ ಮತ್ತು ಚಂದ್ರಶೇಖರ್ ಮೂರನೇ ಸ್ಥಾನ ಪಡೆದರು.

INTSDRC-2 ವಿಭಾಗದಲ್ಲಿ, ಎ.ವಿನೋದ್ ಮತ್ತು ಎನ್.ಮುರುಗನ್ ಮೊದಲ ಸ್ಥಾನ ಪಡೆದರೆ, ಮಂಜು ಜೈನ್ ಮತ್ತು ಡಿಂಕಿ ವರ್ಗೀಸ್ ಎರಡನೇ ಸ್ಥಾನ ಹಾಗೂ ರಾಹೀಲ್ ಅಹ್ಮದ್ ಮತ್ತು ಸಕಾಯನ ಕುಮಾರ್ ಮೂರನೇ ಸ್ಥಾನ ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ, ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ತಂಡ ಒಂದು ಗಂಟೆಗೂ ಹೆಚ್ಚು ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು. ಕ್ಷಮತಾ ಮತ್ತು ಅಮ್ಮೋಲ್ ತಂಡ ಎರಡನೇ ಸ್ಥಾನ ಪಡೆದರೆ, ವನ್ಹ್ರೀ ಪಠಕ್ ಮತ್ತು ರಾಮುಚಂದ್ರ ಮೂರನೇ ಸ್ಥಾನ ಪಡೆದರು.

ಪ್ರೋ ಸ್ಟಾಕ್ ವಿಭಾಗದಲ್ಲಿ, ವಿನಯ್ ಪ್ರಸನ್ನ ಮತ್ತು ಆದಿ ಆಂಥನಿ ಮೊದಲ ಸ್ಥಾನದಲ್ಲಿದ್ದರು. ಡಿ ಕೀರ್ತಿ ಪ್ರಸಾದ್ ಮತ್ತು ಸಿ ಸಖ್ತಿವೇಲ್ ಎರಡನೇ ಸ್ಥಾನ, ವಿನಯ್ ಕುಮಾರ್ ಎಂ ಮತ್ತು ವೈ ಅರುಣ್ ಮೂರನೇ ಸ್ಥಾನ ಪಡೆದರು.
ಕಪಲ್ ವಿಭಾಗದಲ್ಲಿ, ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ ಎಸ್ 6 ನಿಮಿಷಗಳ ಮುನ್ನಡೆಯೊಂದಿಗೆ ಜಯ ಸಾಧಿಸಿದರು. ಶ್ರುತಾ ಜಯಂತ್ ಮತ್ತು ಜಯಂತ್ ಎಂ ಜೈನ್ ಎರಡನೇ ಸ್ಥಾನ, ರಾವಮಿ ಮಾಬೆಲ್ ಮತ್ತು ವಿನೋತ್ ಕುಮಾರ್ ಮೂರನೇ ಸ್ಥಾನ ಪಡೆದರು.

ಸೂಪರ್ ಕಾರ್ ವಿಭಾಗದಲ್ಲೂ, ಭವಾನಿ ಬಾಲಕೃಷ್ಣನ್ ಮತ್ತು ಆನಂದರಾಜ್ ಎಸ್ ಮೊದಲ ಸ್ಥಾನ ಪಡೆದರೆ, ಕರ್ನಾಟಕ ರಾಜ್ಯ ವಿಭಾಗದಲ್ಲಿ ಅಪರ್ಣಾ ಪಠಕ್ ಮತ್ತು ಲಲಿತಾ ಗೌಡ ಮೊದಲ ಸ್ಥಾನ ಪಡೆದರು. ನಾನ್ಲು ಜಾನ್ ಮತ್ತು ಡಿಂಕಿ ವರ್ಗೀಸ್ ದ್ವಿತೀಯ ಸ್ಥಾನ ಹಾಗೂ ರಾಹೀಲ್ ಅಹ್ಮದ್ ಮತ್ತು ಸರವಣ ಕುಮಾರ್ ತೃತೀಯ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು.
ಚಿಕ್ಕಮಗಳೂರಿನ ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MSCC) ಆಯೋಜಿಸಿದ್ದ ಈ ಇವೆಂಟ್‌ನ್ನು ಜೆಕೆ ಟೈರ್ ಮೋಟಾರ್ ಸ್ಪೋರ್ಟ್ಸ್ ಸಹಯೋಗದಲ್ಲಿ ಹಾಗೂ ವಾಮ್ಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ಸಹ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಸೌತ್‌ ಝೋನ್‌ನ ರೌಂಡ್ 1 ತಜ್ಞರು ಹಾಗೂ ಹೊಸ ಪ್ರತಿಭೆಗಳನ್ನು ಒಟ್ಟುಗೂಡಿಸಿ, ಸುಂದರ ಆದರೆ ತಾಂತ್ರಿಕವಾಗಿ ಸವಾಲುಗಳಿರುವ ಚಿಕ್ಕಮಗಳೂರಿನ ಹಾದಿಗಳನ್ನು ನವೀನ ಧೈರ್ಯದಿಂದ ನವಿರಾಗಿ ನಿರ್ವಹಿಸಲು ಪೂರಕವಾಗಿದೆ.

Tags:
error: Content is protected !!