Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಸಿಎಸ್‌ಕೆ ತಂಡದಿಂದ ಹೊರಗುಳಿದ ಬಗ್ಗೆ ಗುಟ್ಟು ಬಿಚ್ಚಿಟ್ಟ ರೈನಾ

ಚೆನ್ನೈ: ಚಿನ್ನ ತಲಾ ಎಂದೇ ಹೆಸರು ಪಡೆದ ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಧಾನ ಆಟಗಾರರಾಗಿದ್ದರು. 2008ರಿಂದಲೂ ಸಿಎಸ್ ಕೆ ತಂಡದ ಪ್ರಮುಖ ಭಾಗವಾಗಿದ್ದ ರೈನಾ 2021ರ ಸೀಸನ್ ಮಧ್ಯದಿಂದ ದೂರವಾಗಿದ್ದರು. ಇದರ ಬಗ್ಗೆ ಎಡಗೈ ಬ್ಯಾಟರ್ ಹೇಳಿಕೊಂಡಿದ್ದಾರೆ.

2021ರ ಸೀಸನ್ ನಲ್ಲಿ ಸಿಎಸ್ ಕೆ ತಂಡದಲ್ಲಿ ಸುರೇಶ್ ರೈನಾ ಬದಲಿಗೆ ರಾಬಿನ್ ಉತ್ತಪ್ಪಗೆ ಅವಕಾಶ ನೀಡಲಾಗಿತ್ತು. ಇದೀಗ ಉತ್ತಪ್ಪ ಜೊತೆಗಿನ ಮಾತುಕತೆ ವೇಳೆ ರೈನಾ ಇದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ನಾನು ಮತ್ತು ಧೋನಿ ಮಾತನಾಡಿದಾಗ, ನೀವು ರಾಬಿನ್ ಉತ್ತಪ್ಪ ಅವರನ್ನು ಆಡಿಸಬಹುದು ಎಂದು ಹೇಳಿದ್ದೆ, ನಿಮ್ಮನ್ನು ಚಾಂಪಿಯನ್ ಮಾಡುವ ವ್ಯಕ್ತಿ ಆತ ಎಂದು ಹೇಳಿದ್ದೆ’ ಎಂದು ರೈನಾ ಮೆಲುಕು ಹಾಕಿದ್ದಾರೆ.

ತನ್ನನ್ನು ಆಡುವ ಬಳಗದಿಂದ ಹೊರಗಿಡುವ ನಿರ್ಧಾರವನ್ನು ಧೋನಿ ಹೇಗೆ ತೆಗೆದುಕೊಂಡರು ಎಂದು ರೈನಾ ಹೇಳಿದರು.

“ಒಮ್ಮೆ ಎಂಎಸ್ ಧೋನಿ ನನ್ನ ಬಳಿ ಬಂದು ‘ನಾವು 2008 ರಿಂದ ಒಟ್ಟಿಗೆ ಆಡಿದ್ದೇವೆ, ಆದರೆ ನಾನು ಈ ಋತುವಿನಲ್ಲಿ ಗೆಲ್ಲಲು ಬಯಸುತ್ತೇನೆ. ಈಗ, ನೀವು ಏನು ಮಾಡಬೇಕೆಂದು ನನಗೆ ಹೇಳಿ’ ಎಂದು ಕೇಳಿದರು. ಅದಕ್ಕೆ ನಾನು ‘ರಾಬಿನ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿ ಮತ್ತು ಫೈನಲ್ ವರೆಗೆ ಅವರು ಆಡುವ ಬಳಗದಲ್ಲಿ ಉಳಿಯುತ್ತಾರೆಂದು ಖಚಿತಪಡಿಸಿ. ನೀವು ಗೆದ್ದರೆ, ಸಿಎಸ್ ಕೆ ಗೆಲ್ಲುತ್ತದೆ. ನಾನು ಆಡಲಿ ಅಥವಾ ಅವನು, ರಾಬಿನ್ ಮತ್ತು ರೈನಾ ಒಂದೇ,” ಎಂದು ರೈನಾ ಹೇಳಿದರು.

2021 ರ ಐಪಿಎಲ್ ನಲ್ಲಿ ಉತ್ತಪ್ಪ ನಾಲ್ಕು ಪಂದ್ಯಗಳಲ್ಲಿ 136.90 ಸ್ಟ್ರೈಕ್ ರೇಟ್‌ ನೊಂದಿಗೆ 115 ರನ್‌ ಗಳನ್ನು ಗಳಿಸಿದ್ದರು, ಸಿಎಸ್‌ಕೆ ತಂಡವು ಫೈನಲ್‌ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು 27 ರನ್‌ ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ