Mysore
17
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

5 ಕೋಟಿ ರೂ ಬಹುಮಾನ ಮೊತ್ತ ನಿರಾಕರಿಸಿದ ರಾಹುಲ್‌ ದ್ರಾವಿಡ್‌

ನವದೆಹಲಿ: ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆಲ್ಲುತ್ತಿದ್ದಂತೆ ಬಿಸಿಸಿಐ 125 ಕೋಟಿ ರೂ ಬಹುಮಾನ ಮೊತ್ತವನ್ನು ಘೋಷಿಸಿತ್ತು. ಈ ಬಹುಮಾನ ಮೊತ್ತವನ್ನು ಭಾರತೀಯ ಆಟಗಾರರಿಗೆ ಮತ್ತು ಸಿಬ್ಬಂದಿ ವರ್ಗಗಳಿಗೆ ಹಂಚಲಾಗಿದೆ. ಅದರಂತೆ 5 ಕೋಟಿ ರೂ ಬಹುಮಾನ ಮೊತ್ತ ಪಡೆದಿರುವ ರಾಹುಲ್‌ ದ್ರಾವಿಡ್‌ ತಮ್ಮ ಹಣದಲ್ಲಿ ಕಡಿತ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಟಿ20 ವಿಶ್ವಕಪ್‌ ಗೆದ್ದ ಟೀಮ್‌ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂ ಬಹುಮಾನ ಮೊತ್ತ ನೀಡಿದೆ. ಈ ಬಹುಮಾನ ಮೊತ್ತವನ್ನು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಹಂಚಲಾಗಿದೆ. ಇಲ್ಲಿ ಟೀಮ್‌ ಇಂಡಿಯಾ ಆಟಗಾರರಿಗೆ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ತಲಾ 5 ಕೋಟಿ ರೂ ನೀಡಲಾಗಿದೆ. ಇನ್ನುಳಿದ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ ನಿಗದಿ ಮಾಡಲಾಗಿದೆ.

ಆದರೆ ಸಿಬ್ಬಂದಿ ವರ್ಗಗಳ ಭಾಗವಾಗಿರುವ ಕೋಚ್‌ ರಾಹುಲ್‌ ದ್ರಾವಿಡ್‌ ಇದೀಗ ಹೆಚ್ಚುವರಿ ಬಹುಮಾನ ಮೊತ್ತವನ್ನು ಪಡೆಯಲು ನಿರಾಕರಿಸಿದ್ದಾರೆ. ಇತರೆ ಸಿಬ್ಬಂದಿಗಳಂತೆ ತಾನು ಸಹ 2.5 ಕೋಟಿ ರೂ ಬಹುಮಾನ ಮೊತ್ತವನ್ನು ತೆಗೆದುಕೊಳ್ಳುತ್ತೇನೆ ಎಂದು ಬಿಸಿಸಿಐಗೆ ತಿಳಿಸಿದ್ದಾರೆ.

ಬಿಸಿಸಿಐ ಸಿದ್ಧಪಡಿಸಿದ ಬಹುಮಾನ ಮೊತ್ತ ವಿತರಣಾ ಸೂತ್ರದ ಪ್ರಕಾರ ರಾಹುಲ್‌ ದ್ರಾವಿಡ್‌ ಜೊತೆಗೆ ಭಾರತ ತಂಡದ 15 ಆಟಗಾರರು ತಲಾ 5 ಕೋಟಿ ರೂ ಪಡೆದಿದ್ದಾರೆ. ಹಾಗೆಯೇ ಸಹಾಯಕ ಸಿಬ್ಬಂದಿಗಳಿಗೆ ತಲಾ 2.5 ಕೋಟಿ ರೂ ನಿಗದಿ ಮಾಡಲಾಗಿದೆ.

ಇಲ್ಲಿ ರಾಹುಲ್‌ ದ್ರಾವಿಡ್‌ ಜೊತೆ ಕಾರ್ಯ ನಿರ್ವಹಿಸಿದ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋರ್‌, ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರೆ ಮತ್ತು ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಅವರಿಗೆ ತಲಾ 2.5 ಕೋಟಿ ರೂ ನಿಗದಿ ಮಾಡಲಾಗಿದೆ.

ಈ ಅಸಮಾನತೆಯನ್ನು ಹೋಗಲಾಡಿಸಲು ಖುದ್ದು ರಾಹುಲ್‌ ದ್ರಾವಿಡ್‌ 2.5 ಕೋಟಿ ರೂ ಕಡಿತಗೊಳಿಸಲು ಮುಂದಾಗಿದ್ದಾರೆ. ಅಲ್ಲದೇ ಇತರೆ ಸಿಬ್ಬಂದಿಗಳಂತೆ ನಾನು ಸಹ 2.5 ಕೋಟಿ ರೂ ಬಹುಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ಬಿಸಿಸಿಐ ಅಧಿಕಾರಿಗೆ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.

 

Tags:
error: Content is protected !!