Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಏಕದಿನ ವಿಶ್ವಕಪ್ ನಲ್ಲಿ ಸಚಿನ್ ದಾಖಲೆ ಮುರಿದ ರಚಿನ್

ಬೆಂಗಳೂರು : ಇಲ್ಲಿನ ಎಮ್ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಯುವ ಬ್ಯಾಟರ್ ರಚಿನ್ ರವೀಂದ್ರ ಶತಕ ಬಾರಿಸಿ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

ಈ ಪಂದ್ಯದಲ್ಲಿ ರಚಿನ್ ರವೀಂದ್ರ ಅವರು ಹಲವು ದಾಖಲೆಗಳನ್ನು ಸೃಷ್ಟಿಸಿದರು. 25 ವರ್ಷ ತುಂಬುವುದರೊಳಗೆ ವಿಶ್ವಕಪ್ ನಲ್ಲಿ ಮೂರು ಶತಕ ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆ ಬರೆದರು. ಈ ಹಿಂದೆ ಸಚಿನ್ ತೆಂಡೂಲ್ಕರ್ ಎರಡು ಶತಕ ಬಾರಿಸಿದ ದಾಖಲೆ ಹೊಂದಿದ್ದರು. ರಚಿನ್ ಅವರ ವಯಸ್ಸು 23 ಆಗಿದೆ.

ಭಾರತ ಮೂಲದವರಾದ ರಚಿನ್ ರವೀಂದ್ರ ಭಾರತದ ನೆಲದಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಇದುವರೆಗೆ ಒಂದೇ ಋತುವಿನಲ್ಲಿ ಮೂರು ಶತಕ ಬಾರಿಸಿ ನ್ಯೂಝಿಲ್ಯಾಂಡ್ ಪರ ವಿಶ್ವಕಪ್ ನಲ್ಲಿ 3 ಶತಕ ಬಾರಿಸಿದ ಕಿವೀಸ್ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ರಚಿನ್ 25 ವರ್ಷ ತುಂಬುವುದರ ಒಳಗೆ ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲಿಯೂ ಸಚಿನ್ ಅವರನ್ನು ರಚಿನ್ ಸರಿಗಟ್ಟಿದ್ದಾರೆ. 1996ರ ವಿಶ್ವಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು 523 ರನ್ ಬಾರಿಸಿದ್ದರು. ಸದ್ಯ ರಚಿನ್ ರವೀಂದ್ರ ಕೂಡ 523 ರನ್ ಬಾರಿಸಿದ್ದಾರೆ. ಮುಂದೆ ಒಂದು ರನ್ ಗಳಿಕೆ ಕಂಡರೂ ರಚಿನ್ ದಾಖಲೆ ಬರೆಯಲಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ