ಬೆಂಗಳೂರು : ಕರ್ನಾಟಕದ ಸ್ಫೋಟಕ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.ಬುಧವಾರ ಟ್ವೀಟರ್ ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿ ಸುದೀರ್ಘ ಪತ್ರ ಬರೆದಿದ್ದಾರೆ.

ಉತ್ತಪ್ಪ ದೇಶೀಯ ಟೂರ್ನಿಗಳಲ್ಲಿ ಕರ್ನಾಟಕ, ಕೇರಳ ತಂಡವನ್ನು ಪ್ರತಿನಿಧಿಸಿದ್ದರೆ, ಐಪಿಎಲ್ ನಲ್ಲಿ ಡೆಲ್ಲಿ, ಪಂಜಾಬ್ ಕಿಂಗ್ಸ್ ಆರ್ ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ತಂಡಗಳ ಪರ ಬ್ಯಾಟ್ ಬೀಸಿದ್ದರು.
ಚೊಚ್ಚಲ ಟಿ-20 ವಿಶ್ವಕಪ್ ಟಿ-೨೦ ವಿಜೇತ ತಂಡದ ಸದಸ್ಯರಾಗಿರುವ ಉತ್ತಪ್ಪ ಉತ್ತಪ್ಪ 46 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 936 ರನ್ ಗಳಿಸಿದ್ದಾರೆ. 86 ಅವರ ವೈಯಕ್ತಿಕ ಶ್ರೇಷ್ಠ ಇನಿಂಗ್ಸ್ ಆಗಿದ್ದು, 6 ಬಾರಿ ಅರ್ಧಶತಕ ಗಡಿ ದಾಟಿದ್ದಾರೆ.
13 ಟಿ-20 ಪಂದ್ಯಗಳನ್ನು ಆಡಿರುವ ಉತ್ತಪ್ಪ 249 ರನ್ ಗಳಿಸಿದ್ದು ಒಂದು ಬಾರಿ ಮಾತ್ರ ಅರ್ಧಶತಕ ಗಳಿಸಿದ್ದಾರೆ.





