Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಪ್ರೋ ಕಬಡ್ಡಿ ಲೀಗ್‌: ಯು ಮುಂಬಾಗೆ ರೋಚಕ ಜಯ

ಅಹ್ಮದಾಬಾದ್‌ : ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌ ಸೀಸನ್‌ 10) ಆವೃತ್ತಿಯ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಯು ಮುಂಬಾ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಅರೆನಾ ಟ್ರಾನ್ಸ್‌ ಸ್ಟೇಡಿಯಂನಲ್ಲಿ ನಡೆದ ಯು ಮುಂಬಾ ತಂಡ ಯುಪಿ ಯೋಧಾಸ್‌ ವಿರುದ್ಧದ ಪಂದ್ಯದಲ್ಲಿ 34-31 ಅಂತರದಿಂದ ಗೆಲುವು ದಾಖಲಿಸಿದರು.

ಯು ಮುಂಬಾ ತಂಡದ ಅಮಿರ್‌ಮೊಹಮದ್‌ ಅವರ ಅಮೋಘ ಪ್ರದರ್ಶನ ತಂಡದ ಗೆಲುವಿಗೆ ಪ್ರಮು ಪಾತ್ರ ವಹಿಸಿತು. ಇವರಿಗೆ ಸಾಥ್‌ ನೀಡಿದ ರಿಂಕು 5, ಗುಮಾನ್‌ ಸಿಂಗ್‌ 5 ಪಾಯಿಂಟ್‌ ಗಳಿಸಿದರು.

ಯುಪಿ ಯೋಧಾಸ್‌ ಪರ ಸುರೇಂದರ್‌ ಗಿಲ್‌ 7, ಅನಿಲ್‌ ಕುಮಾರ್‌ 7, ವಿಜಯ್‌ ಮಲ್ಲಿಕ್‌ 5 ಪಾಯಿಂಟ್‌ ಕೊಡುಗೆ ಕೊಟ್ಟರು.

40 ನಿಮಿಷಗಳ ಕಾದಾಟದಲ್ಲಿ ಯು ಮುಂಬಾ 3 ಅಂಕಗಳ ಜಯ ದಾಖಲಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!