ಅಹ್ಮದಾಬಾದ್ : ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ ಸೀಸನ್ 10) 2023 ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಜಯಭೇರಿ ಬಾರಿಸಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಅರೆನಾ ಟ್ರಾನ್ಸ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧ ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 38-32 ಅಂತರದಿಂದ ಗೆಲುವು ದಾಖಲಿಸಿದರು.
ಗುಜರಾತ್ ರ ಸೋನು ಜಗ್ಲಾನ್ ಅವರು 11 ರೈಡ್ ಪಾಯಿಂಟ್ ತಂದುಕೊಡುವ ಮೂಲಕ ಗುಜರಾತ್ ಗೆಲುವಿಗೆ ಕಾರಣರಾದರು. ರಾಕೇಶ್ 5, ರೋಹಿತ್ ಗುಲಿಯಾ 4 ರೈಡ್ ಪಾಯಿಂಟ್ ತಂದುಕೊಟ್ಟರು.
ಇಸ್ಮಾಯಿಲ್ 3 ಟ್ಯಾಕಲ್ ಪಾಯಿಂಟ್ ಮತ್ತು 1 ಬೋನಸ್ ಪಾಯಿಂಟ್ ತಂದುಕೊಟ್ಟರು.
ಇತ್ತ ತೆಲುಗು ಟೈಟನ್ಸ್ ಪರ ಪವನ್ ಶೆರಾವತ್ 6 ರೈಡ್ ಪಾಯಿಂಟ್, 1 ಟ್ಯಾಕಲ್ ಮತ್ತು 4 ಬೋನಸ್ ಮೂಲಕ 11 ಪಾಯಿಂಟ್ ತಂದುಕೊಟ್ಟರು. ರಜನೀಶ್ ದಳಾಳ್ 5, ಸಂಜೀವಿನಿ 2 ಟ್ಯಾಕಪ್, 3 ಬೋನಸ್ ಮೂಲಕ 5 ಪಾಯಿಂಟ್, ರಾಬಿನ್ ಚೌಧರಿ 3 ಬೋನಸ್ ಪಾಯಿಂಟ್ ಪಡೆದರು.
40 ನಿಮಿಷಗಳ ಕಾದಾಟದಲ್ಲಿ ಆರಂಭದಿಂದಲೇ ಯಶಸ್ಸು ಪಡೆದ ಗುಜರಾತ್ ಉದ್ಘಾಟನಾ ಪಂದ್ಯದಲ್ಲಿ ಗೆಲುವು ದಾಖಲಿಸಿತು.
ಪ್ರೊ ಕಬಡ್ಡಿ ಲೀಗ್ 2023 ಯಲ್ಲಿ ಪಂದ್ಯವನ್ನು ಗೆದ್ದ ತಂಡಕ್ಕೆ 5 ಅಂಕಗಳನ್ನು ನೀಡಲಾಗುತ್ತದೆ, ಆದರೆ ಸೋತ ತಂಡಕ್ಕೆ 0 ಅಂಕಗಳನ್ನು ನೀಡಲಾಗುತ್ತದೆ. ಪಂದ್ಯ ಟೈನಲ್ಲಿ ಅಂತ್ಯಗೊಂಡರೆ, ಎರಡೂ ತಂಡಗಳಿಗೆ 3 ಅಂಕಗಳನ್ನು ನೀಡಲಾಗುತ್ತದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳು ಒಂದೇ ಅಂಕಗಳನ್ನು ಪಡೆದರೆ, ಉತ್ತಮ ಅಂಕಗಳನ್ನು ಹೊಂದಿರುವ ತಂಡವನ್ನು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರಿಸಲಾಗುತ್ತದೆ.
ಪ್ರೊ ಕಬಡ್ಡಿ ಲೀಗ್‌ನಲ್ಲಿ ಗೆದ್ದ ತಂಡಕ್ಕೆ 3 ಕೋಟಿ ರೂ ಬಹುಮಾನ ನೀಡುತ್ತಾರೆ.
ರನ್ನರ್‌ಅಪ್ ತಂಡಕ್ಕೆ 1.8 ಕೋಟಿ ಬಹುಮಾನ
ಸೆಮಿಸ್‌ನಲ್ಲಿ ಸೋತ ತಂಡಗಳಿಗೆ (ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ) 90 ಲಕ್ಷ ಬಹುಮಾನ.
ಐದು ಮತ್ತು ಆರನೇ ಸ್ಥಾನಕ್ಕೆ 45 ಲಕ್ಷ ಬಹುಮಾನ ನೀಡಲಾಗುತ್ತದೆ.