Mysore
27
overcast clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಟೀಂ ಇಂಡಿಯಾ ಡ್ರೆಸ್ಸಿಂಗ್‌ ರೂಂನಲ್ಲಿ ಪ್ರಧಾನಿ: ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಕೋಚ್‌

ಮುಂಬೈ : ಏಕದಿನ ವಿಶ್ವಕಪ್‌-೨೦೨೩ರ ಫೈನಲ್‌ನ ಸೋಲಿನ ನಂತರ ಭಾರತ ತಂಡದ ಡ್ರೆಸ್ಸಿಂಗ್‌ ರೂಂಗೆ ಭೇಟಿ ನೀಡಿ, ಟೀಮ್‌ ಇಂಡಿಯಾ ಆಟಗಾರರನ್ನು ಸಾಂತ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಭಾರತ ತಂದಡ ಮಾಜಿ ಕೋಚ್‌ ರವಿಶಾಸ್ತ್ರಿ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಅವರು,”‘ಡ್ರೆಸ್ಸಿಂಗ್ ರೂಮ್ ಹೇಗಿರುತ್ತದೆ ಎಂಬುದು ನನಗೆ ತಿಳಿದಿರುವ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಕ್ರಿಕೆಟಿಗನಾಗಿ ಹಲವು ವರ್ಷಗಳಿಂದ, ಭಾರತದ ತರಬೇತುದಾರನಾಗಿ ಏಳು ವರ್ಷಗಳಿಗೂ ಹೆಚ್ಚು ಕಾಲ ಆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದೇನೆ”. ಒಂದು ದೇಶದ ಪ್ರಧಾನಿಯಾಗಿರುವಾಗ ಡ್ರೆಸ್ಸಿಂಗ್ ರೂಮ್‌ಗೆ ಕಾಲಿಡುವುದು ವಿಶೇಷವಾದ ನಡವಳಿಕೆ. ಇಂತಹ ಸಮಯದಲ್ಲಿ ಆಟಗಾರರಿಗೆ ಏನು ಅನಿಸುತ್ತದೆ ಎಂಬುದು ತಂಡದ ಮಾಜಿ ಕೋಚ್ ಆಗಿದ್ದ ನನಗೆ ತಿಳಿದಿದೆ

ಇದು ಕರುಳು ಹಿಂಡುವ ಭಾವನೆ ಮತ್ತು ನೀವು ಸೋಲಿನಿಂದಾಗಿ ಕಂಗೆಟ್ಟಿರುವಾಗ ಅದೊಂತರ ವಿಚಿತ್ರವಾದ ಭಾವನೆ ನಿಮ್ಮನ್ನು ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್‌ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗಿರುತ್ತದೆ. ಏಕೆಂದರೆ, ಅದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ’ ಎಂದು ಪ್ರಧಾನಿ ನಡೆಯನ್ನು ರವಿಶಾಸ್ತ್ರಿ ಕೊಂಡಾಡಿದ್ದಾರೆ.

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ.೧೯ ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್‌ ಹಾಗೂ ಬೌಲಂಗ್‌ ಎರಡು ವಿಭಾಗದಲ್ಲಿಯೂ ವೈಫಲ್ಯ ಕಂಡು ಆಸೀಸ್‌ ವಿರುದ್ದ ೬ ವಿಕೆಟ್‌ಗಳಿಂದ ಸೋತಿತ್ತು. ಆಸೀಸ್‌ ತಮ್ಮ ೬ನೇ ಟ್ರೋಫಿಗೆ ಮುತ್ತಿಕ್ಕಿತ್ತು.

ಫೈನಲ್‌ ಪಂದ್ಯ ವೀಕ್ಷಣೆಗೆ ಹಲವಾರು ಗಣ್ಯರು ಹಾಗೂ ಚಲನಚಿತ್ರ ನಟರು ಆಗಮಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಆಸೀಸ್‌ ತಂಡಕ್ಕೆ ಪ್ರಶಸ್ತಿ ನೀಡಿ ನಂತರ ಭಾರತ ತಂಡದ ಡ್ರೆಸ್ಸಿಂಗ್‌ ರೂಂಗೆ ಬಂದ ಪ್ರಧಾನಿ ಮೋದಿ, ಅವರೊಂದಿಗೆ ಕೆಲಕಾಲ ಕಳೆದು, ಸಂವಹನ ನಡೆಸಿ ಆಟಗಾರರಿಗೆ ಧೈರ್ಯ ತುಂಬಿದ್ದರು.

https://x.com/ANI/status/1727995687705735391?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!