Mysore
25
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ವಿರೋಚಿತ ಸೋಲು ಕಂಡರೂ ನಮ್ಮೆಲ್ಲರ ಹೃದಯ ಗೆದ್ದ ಪ್ರಜ್ಞಾನಂದ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ʼವಿಶ್ವಕಪ್ ಚೆಸ್ ಪಂದ್ಯಾಕೂಟದಲ್ಲಿ ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ಅವರು ವಿರೋಚಿತ ಸೋಲು ಕಂಡರೂ ಅವರ ಸಾಧನೆ ನಮ್ಮೆಲ್ಲರ ಹೃದಯ ಗೆದ್ದಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ʼʼಪಂದ್ಯದ ಕೊನೆಯ ಕ್ಷಣದ ವರೆಗೂ ಪ್ರಜ್ಞಾನಂದ ತೋರಿದ ಹೋರಾಟದ ಮನೋಭಾವ, ತಾಳ್ಮೆ, ಚಾಣಾಕ್ಷತನ ಮುಂಬರುವ ದಿನಗಳಲ್ಲಿ ಖಂಡಿತಾ ಯಶಸ್ಸು ತಂದು ಕೊಡಲಿದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ʼʼಸೋಲಿನಿಂದ ಕಲಿತ ಪಾಠಗಳು ನಿಮ್ಮ ಗೆಲುವಿನ ಹಾದಿಯ ಮೆಟ್ಟಿಲಾಗಲಿ ಎಂದು ಹಾರೈಸುತ್ತೇನೆʼʼ ಎಂದು ಮುಖ್ಯಮಂತ್ರಿಗಳು ಟ್ವೀಟ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ