ತೆಲುಗಿನ ಸ್ಟಾರ್ ನಟ ಪ್ರಭಾಸ್ ನಟನೆಯ, ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಸಲಾರ್ ಘರ್ಜನೆಗೆ ಹಲವಾರು ದಾಖಲೆಗಳು ಪುಡಿಪಡಿಯಾಗಿದ್ದು, ಈ ಚಿತ್ರ ಮೊಲದನೇ ದಿನ ಗಳಿಕೆಯಲ್ಲಿ ಬರೋಬ್ಬರಿ 178.7 ಕೋಟಿ ರೂಗಳನ್ನು ಬಾಚಿಕೊಂಡಿದೆ. ಈ ಬಗ್ಗೆ ಮಲಯಾಳಂ ನಟ ಪೃಥ್ವಿರಾಜ್ ಸಾಮಾಜಿಕ ಜಾಲತಾಣ ಎಕ್ಸ್‌ನಲಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತೊಮ್ಮ ಸಿನಿಮಾ ವಹಿವಾಟು ವಿಶ್ಲೇಷಕ ರಮೇಶ್ ಬಾಲಾ ಅವರು ಸಹಾ ಸಾಮಾಜಿಕ ಮಾಧ್ಯಮದಲ್ಲಿ ಸಲಾರ್ ವಹಿವಾಟು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಲಾರ್ ಕೇವಲ ಭಾರತ ಮಾತ್ರವಲ್ಲದೇ ಯುರೋಪ್, ಅಮೇರಿಕಾ, ಆಸ್ಟ್ರೇಲಿಯಾ, ಅರಬ್ ದೇಶಗಳು ಸೇರಿದಂತೆ ಹಲವು ದೇಶಗಳಲ್ಲಿ ಭರ್ಜರಿ ಓಪನಿಂಗ್ ಪಡದುಕೊಂಡಿದೆ.
ಭಾರತದಲ್ಲಿ ಸಲಾರ್ ಮೊದಲ ದಿನ 95 ಕೋಟಿ ವಹಿವಾಟು ನಡೆಸಿದೆ. ಈ ಪೈಕಿ ತೆಲುಗಿನಲ್ಲಿ ಶೇ 80 ರಷ್ಟು ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 70 ಕೋಟಿ, ಕರ್ನಾಟಕದಲ್ಲಿ 12 ಕೋಟಿ, ಕೇರಳದಲ್ಲಿ 5 ಕೋಟಿ ಕಲೆಕ್ಷನ್ ಮಾಡಿದೆ.
ಶಾರುಖ್ ಖಾನ್ ನಟನೆಯ ಪಠಾಣ್, ಜವಾನ್ ಮತ್ತು ರಣಬೀರ್ ಕಪೂರ್ ನಟನೆಯ ಅನಿಮಲ್ ಸೋಲಿಸಿ ಈ ವರ್ಷದ ಅತಿದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಖ್ಯಾತಿ ಪಡೆದಿದೆ.
ಭಾರತದಲ್ಲಿ ಪಠಾಣ್ 57 ಕೋಟಿ, ಜವಾನ್ 75ಕೋಟಿ, ಅನಿಮಲ್ 63 ಕೋಟಿ ಗಳಿಸಿತ್ತು. ಆದರೆ ಸಲಾರ್ ಮೊಲದ ದಿನದ ಗಳಿಕೆಯಲ್ಲಿ 95 ಕೋಟಿ ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಹೊಂಬಾಳೆ ಫಿಲ್ಮಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮುಖ್ಯ ಭೂಮಿಕೆಯಲ್ಲಿ ಪ್ರಭಾಸ್, ಪೃಥ್ವಿರಾಜ್, ಶೃತಿ ಹಾಸನ್ ಇದ್ದಾರೆ. ಕೆಜಿಎಫ್ ತಂಡವೇ ಇಲ್ಲಿಯೂ ಇದೆ. ರವಿ ಬಸ್ರೂರ್ ಸಂಗೀತ ನೀಡಿದರೇ, ಭೂವನ್ ಗೌಡ ಛಾಯಾಗ್ರಹಣವಿದೆ. ಇನ್ನೂ ಪ್ರಶಾತ್ ನೀಲ್ ಸಲಾರ್ ಚಿತ್ರ ನಿರ್ದೇಶಿಸಿದ್ದಾರೆ.
https://x.com/PrithviOfficial/status/1738488526155751659?s=20