Mysore
13
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

PKL-10: ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಪುಣೇರಿ ಪಲ್ಟಾನ್ಸ್‌!

ಹೈದರಾಬಾದ್‌: ಹರ್ಯಾಣ ಸ್ಟೀಲರ್ಸ್‌ ವಿರುದ್ಧ ರೋಚಕ ಜಯ ದಾಖಲಿಸುವ ಮೂಲಕ ಪ್ರೋ ಕಬಡ್ಡಿ ಲೀಗ್‌ ಸೀಸನ್‌ 10 ಚಾಂಪಿಯನ್‌ ಆಗಿ ಪುಣೇರಿ ಪಲ್ಟಾನ್‌ ಹೊರ ಹೊಮ್ಮಿದೆ.

ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುಣೇರಿ ಪಲ್ಟಾನ್‌ ಮತ್ತು ಹರ್ಯಾಣ ಸ್ಟೀಲರ್ಸ್‌ ನಡುವಿನ ಫೈನಲ್‌ ಪಂದ್ಯದಲ್ಲಿ, ಸ್ಟೀಲರ್ಸ್‌ ತಂಡವನ್ನು 28-23 ಅಂತರದಿಂದ ಸೋಲಿಸಿದ ಅಸ್ಲಾಮ್‌ ಇನಾಮ್ದಾರ್‌ ನಾಯಕತ್ವದ ಪಲ್ಟಾನ್‌ ತಂಡ ತನ್ನ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿದೆ.

ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪಲ್ಟಾನ್‌ ತಂಡ ಒಂದು ಬಾರಿ ಹರ್ಯಾಣವನ್ನು ಆಲ್‌ಔಟ್‌ ಮಾಡುವ ಮೂಲಕ ಮೇಲೆ ಬರದಂತೆ ನೋಡಿಕೊಂಡಿತು. ಪಲ್ಟಾನ್‌ನ ಪಂಕಜ್‌ ಮೋಹಿತೆ 9 ರೈಡ್‌ ಪಾಯಿಂಟ್ಸ್‌, ಗೋಯತ್‌ 5 ರೈಡ್‌ ಪಾಯಿಂಟ್ಸ್‌ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತು. ಈ ಟೂರ್ನಿಯಲ್ಲೇ ಅತಿಹೆಚ್ಚು ಟ್ಯಾಕಲ್‌ ಪಾಯಿಂಟ್‌ ಗಳಿಸಿ ಮಹಮದ್ರೇಜಾ ಶಾಡ್ಲೋಯಿ 2 ಟ್ಯಾಕಲ್‌ ಪಾಯಿಂಟ್‌ ಗಳಿಸಿ ಗಮನ ಸೆಳೆದರು.

ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಪುಣೇರಿ ಪಲ್ಟಾನ್‌ ತಂಡಕ್ಕೆ ಮೂರು ಕೋಟಿ ಬಹುಮಾನ ಮೊತ್ತ ದಕ್ಕಿತು. ರನ್ನರ್ಸ್‌ ಅಪ್‌ ಆದ ಹರ್ಯಾಣ ಸ್ಟೀಲರ್ಸ್‌ಗೆ 1.8 ಕೋಟಿ ಹಣ ದೊರೆಯಿತು.

ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರಶಸ್ತಿ ಗಳಿಸಿ ಆಟಗಾರರಿವರು:

ಟೂರ್ನಿಯ ಅತ್ಯುತ್ತಮ ರೈಡರ್‌: ಅಶು ಮಲ್ಲಿಕ್‌
ಟೂರ್ನಿಯ ಅತ್ಯುತ್ತಮ ಡಫೆಂಡರ್‌: ಮೊಹಮ್ಮದ್ರೇಜಾ ಚಿಯಾನೆಹ್‌
ಟೂರ್ನಿಯ ಹೊಸ ಯುವ ಆಟಗಾರ: ಯೋಗೇಶ್‌
ಟೂರ್ನಿಯ ಮೌಲ್ಯಯುತ ಆಟಗಾರ: ಅಸ್ಲಾಂ ಇನಾಮ್ದಾರ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!