ಪ್ಯಾರಿಸ್: ಪ್ಯಾರಿಸ್ ಒಲಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಫ್ರೀಸ್ಟೈಲ್ ನಲ್ಲಿ ಭಾಗವಹಿಸಿದ್ದ ವಿನೇಶ್ ಫೋಗಟ್ ಅವರು ಸಲ್ಲಿಸಿದ ಮೇಲ್ಮನವಿ ತೀರ್ಪನ್ನು ನಾಳೆಗೆ (ಆಗಸ್ಟ್ 11) ಕಾಯ್ದಿರಿಸಿ ಕ್ರೀಡಾ ನ್ಯಾಯ ಮಂಡಳಿ ತಾತ್ಕಾಲಿಕ ವಿಭಾಗವು ತಿಳಿಸಿದೆ.
ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಾರೆ ಎಂದು ವಿನೇಶ್ ಫೋಗಟ್ ಅವರನ್ನು ಫೈನಲ್ಸ್ ಪಂದ್ಯದಿಂದ ಬ್ಯಾನ್ ಮಾಡಲಾಗಿತ್ತು.
ಇದನ್ನು ಪ್ರಶ್ನಿಸಿ ಕ್ರೀಡಾ ನ್ಯಾಯಮಂಡಳಿಗೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಒಂದೇ ದಿನ ಮೂರು ಪಂದ್ಯಗಳನ್ನು ಆಡಿ ಗೆದ್ದಿದ್ದ ಅವರು, ತಮಗೆ ಜಂಟಿಯಾಗಿ ಬೆಳ್ಳಿ ಪದಕವನ್ನಾದರು ನೀಡಬೇಕೆಂದು ಮೇಲ್ಮನವಿ ಕೋರಿ ಅರ್ಜಿ ಸಲ್ಲಿಸಿದ್ದರು.
ತಾತ್ಕಾಲಿಕ ವಿಭಾಗ ಅಧ್ಯಕ್ಷರು ತೀರ್ಪು ಪ್ರಕಟಿಸಲು ಸಮಯ ನಿಗದಿಪಡಿಸಿತ್ತು. ಅದರಂತೆ ಇಂದು ತೀರ್ಪು ನೀಡಲು ನೀಡಿದ್ದ ಗಡುವನ್ನು ನಾಳೆಗೆ ಮುಂದೂಡಿ ಕ್ರೀಡಾ ನ್ಯಾಯ ಮಂಡಳಿ ಆದೇಶ ಹೊರಡಿಸಿದೆ.





