Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪ್ಯಾರಿಸ್‌ ಒಲಂಪಿಕ್ಸ್‌ : ಕ್ವಾರ್ಟರ್‌ ಫೈನಲ್‌ಗೆ ಎಂಟ್ರಿ ಕೊಟ್ಟ ಇಂಡಿಯಾ ಹಾಕಿ ತಂಡ

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಫೈನಲ್‌ ಹಂತ ಪ್ರವೇಶಿಸಿದೆ. ಮಂಗಳವಾರ ಮುಖಾಮುಖಿಯಲ್ಲಿ ಗ್ರೂಪ್‌ ʼಬಿʼ ಯಲ್ಲೇ ಅತ್ಯಂತ ದುರ್ಬಲ ಎದುರಾಳಿಯಾಗಿದ್ದ ಐರ್ಲೆಂಡ್‌ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಭಾರತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಇದಕ್ಕೂ ಮುನ್ನ ನ್ಯೂಝಿಲೆಂಡ್‌ ವಿರುದ್ಧ ಭಾರತ ತಂಡವು 3-2 ಅಂತರದಿಂದ ಗೆಲುವು ಸಾಧಿಸಿತ್ತು. ಹಾಗೆಯೇ ಅರ್ಜೆಂಟೀನಾ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಐರ್ಲೆಂಡ್‌ ವಿರುದ್ಧ 2-0 ಅಂತರದಿಂದ ಗೆದ್ದು ಮುಂದಿನ ಹಂತಕ್ಕೇರಿದೆ.

ಫೈನಲ್‌ ಪ್ರವೇಶಿಸಿರುವ ಭಾರತ ಬಲಿಷ್ಠ ಬೆಲ್ಜಿಯಂ ಮತ್ತು ಆಸ್ಟ್ರೇಲಿಯ ತಂಡಗಳನ್ನು ಆಗಸ್ಟ್‌ 1 ಮತ್ತು 2 ರಂದು ಎದುರಿಸಲಿದೆ. ವಿಶ್ವ ಹಾಕಿ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಬೆಲ್ಜಿಯಂ ತಂಡವನ್ನು ಎದುರಿಸುವ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಟೀಮ್‌ ಇಂಡಿಯಾ ಮುಂದಿದೆ. ಪ್ರತಿ ವಿಭಾಗದ ಆಗ್ರ 4 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

 

Tags:
error: Content is protected !!