Mysore
33
few clouds

Social Media

ಶನಿವಾರ, 11 ಏಪ್ರಿಲ 2026
Light
Dark

Paris Olympics 2024: ಕುಸ್ತಿಯಲ್ಲಿ ಸೆಮಿಸ್‌ ತಲುಪಿದ ವಿನೇಶ್‌ ಫೋಗಾಟ್‌

ಪ್ಯಾರಿಸ್‌: ವಿಶ್ವವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಒಕ್ಸಾನಾ ಲಿವಾಚ್ ಅವರನ್ನು ಸೋಲಿಸಿದ ಭಾರತದ ವಿನೇಶ್ ಫೋಗಟ್ ಮತ್ತೊಮ್ಮೆ ಅದ್ಭುತ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ಸ್‌ ತಲುಪಿದರು.

ಉಕ್ರೇನ್‌ನ ಒಸ್ಕಾನ ವಿವಚ್‌ ವಿರುದ್ಧ ಕ್ವಾರ್ಟರ್‌ ಫೈನಲ್ಸ್‌ ಪಂದ್ಯದಲ್ಲಿ 7-5 ಅಂಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿ ಸೆಮಿಸ್‌ಗೆ ಅರ್ಹತೆ ಪಡೆದುಕೊಂಡರು.

ಉಕ್ರೇನ್‌ನ ವಿವಚ್‌ ವಿರುದ್ಧ ಪಂದ್ಯ ಆರಂಭದಿಂದಲೂ ರೋಚಕ ಹಣಾಹಣೆ ನಡೆದಿತ್ತು. ಇದರಲ್ಲಿ ಕೊನೆವರೆಗೂ ಮುನ್ನಡೆ ಕಾಯ್ದುಕೊಂಡ ಫೋಗಾಟ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವಿನ ನಗೆ ಬೀರಿದರು. ಟೂರ್ನಿಯುದ್ದಕ್ಕೂ ಉತ್ತಮವಾಗಿ ಆಟವಾಡಿರುವ ಫೋಗಾಟ್‌ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಈ ಪಂದ್ಯಕ್ಕೂ ಮೊದಲು ನಡೆದ ಎಲಿಮಿನೆಟರ್‌ ಸುತ್ತಿನಲ್ಲಿ ನಾಲ್ಕುಬಾರಿ ವಿಶ್ವ ಚಾಂಪಿಯನ್‌ ಜಪಾನಿನ ಯುಇ ಸುಸಾಕಿ ಅವರನ್ನು ವಿನೇಶಾ ಫೋಗಾಟ್‌ ಅವರು ಸೋಲಿಸಿ ದಾಖಲೆ ಬರೆದರು. ರೋಚಕ ಹಣಾಹಣೆಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಫೋಗಾಟ್‌, ಸುಸಾಕಿ ವಿರುದ್ಧ 3-2ರ ಅಂತದಿಂದ ಗೆಲುವು ದಾಖಲಿಸಿ ಕ್ವಾರ್ಟರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

https://x.com/sportwalkmedia/status/1820774318751793372

Tags:
error: Content is protected !!