Mysore
27
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

Paris Olympics 2024: ಹಾಕಿ; ಬೆಲ್ಜಿಯಂ ವಿರುದ್ಧ ಸೋತರು ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಭಾರತ

ಪ್ಯಾರಿಸ್‌: ಒಲಂಪಿಕ್ಸ್‌ ಕ್ರೀಡಾಕೂಟ 2024ರ ಹಾಕಿ ಪಂದ್ಯಾವಳಿಯಲ್ಲಿ ತನ್ನ ಅಜೇಯ ಓಟ ಮುಂದುವರೆಸಿದ್ದ ಭಾರತ ತಂಡಕ್ಕೆ ಮೊದಲ ಆಘಾತವಾಗಿದೆ. ಭಾರತ ತಂಡ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಸೋಲುವ ಮೂಲಕ ಈ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.

ಗುರುವಾರ (ಆ.1) ನಡೆದ ಭಾರತ ಹಾಗೂ ಬೆಲ್ಜಿಯಂ ನಡುವಿನ ಪೋಲ್‌ ʼಬಿʼ ಗುಂಪು ಹಂತದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಪಡೆ ಸೋಲು ಅನುಭವಿಸಿತ್ತು. ಹೀಗಿದ್ದರೂ ಸಹಾ ಭಾರತ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿದೆ.

ಮೊದಲಾರ್ಧದಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಸಿದರೇ, ಬಳಿಕ ಪಂದ್ಯವನ್ನು ತಮ್ಮತ್ತ ಸೆಳೆದ ಬೆಲ್ಜಿಯಂ ಸತತ ಎರಡು ಗೋಲುಗಳನ್ನು ಬಾರಿಸುವ ಮೂಲಕ 2-1 ಅಂತರಿದಂದ ಗೆದ್ದು ಬೀಗಿತು.

ಈ ಪಂದ್ಯ ಸೋತಿದ್ದರೂ ಸಹಾ ಅರ್ಹ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ಭಾರತ ತಂಡ ಯಶಸ್ವಿಯಾಗಿದ್ದು, ಭಾರತ ತಂಡದೊಂದಿಗೆ ಬೆಲ್ಜಿಯಂ ಸಹಾ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

https://x.com/Media_SAI/status/1818948015908098472

Tags:
error: Content is protected !!