Mysore
27
haze

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಪಾಕಿಸ್ತಾನ ತಂಡ ಏಷ್ಯಾ ಕಪ್ ಮತ್ತು ವಿಶ್ವಕಪ್ ನ ಪ್ರಬಲ ಸ್ಪರ್ಧಿ : ಅಶ್ವಿನ್

ಚೆನ್ನೈ: ಏಷ್ಯಾಕಪ್‌ನಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಸ್ಥಿರ ಪ್ರದರ್ಶನವು ಪಾಕಿಸ್ಥಾನ ತಂಡವನ್ನು ಇನ್ನಷ್ಟು ಪ್ರಬಲವಾಗಿಸುತ್ತದೆ ಎಂದು ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ‘ಏಷ್ಯಾ ಕಪ್ ನಲ್ಲಿ ಪಾಕಿಸ್ಥಾನ ಮತ್ತು ಭಾರತ ಎರಡನ್ನೂ ಗೆಲ್ಲುವ ಸಾಮರ್ಥ್ಯ ಉಳ್ಳ ತಂಡಗಳು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಸತತ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ವಿಶ್ವಕಪ್ ಗೆ ಹೋಗುವ ತಂಡ ಅಪಾಯಕಾರಿಯಾಗಿರಲಿದೆ’ ಎಂದು ಹೇಳಿದ್ದಾರೆ.

ಪಾಕಿಸ್ಥಾನ ಅಸಾಧಾರಣ ತಂಡವಾಗಿರುವುದರಿಂದ ಏಷ್ಯಾ ಕಪ್ ಮತ್ತು ನಂತರದ ವಿಶ್ವಕಪ್‌ಗೆ ಗಂಭೀರ ಸ್ಪರ್ಧಿಯಾಗಲಿದೆ’ ಎಂದು ಅಶ್ವಿನ್ ಹೇಳಿದ್ದಾರೆ.

ಭಾರತ ತಂಡ ಪಾಕಿಸ್ಥಾನದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಆಡಿದ ಕಳೆದ ಮೂರು ಪಂದ್ಯಗಳನ್ನು ಗೆದ್ದಿದೆ. ಸೆಪ್ಟೆಂಬರ್ 2 ರಂದು ನಡೆಯಲಿರುವ ಬಹು ನಿರೀಕ್ಷಿತ ಹಣಾಹಣಿಯಲ್ಲಿ ಭಾರತವನ್ನು ಎದುರಿಸುವ ಮೊದಲು ಬುಧವಾರ ಟೂರ್ನಮೆಂಟ್ ಆರಂಭಿಕ ಪಂದ್ಯದಲ್ಲಿ ನೇಪಾಳವನ್ನು ಎದುರಿಸುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!