Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

7 ವರ್ಷಗಳ ಬಳಿಕ ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ತಂಡ

ನವದೆಹಲಿ : ಏಳು ವರ್ಷಗಳ ನಂತರ ಪಾಕಿಸ್ತಾನ ಏಕದಿನ ಕ್ರಿಕೆಟ್ ತಂಡವು ಹೈದರಾಬಾದ್‌ಗೆ ಬಂದಿಳಿಯಿತು. ಅಕ್ಟೋಬರ್ 5ರಿಂದ ಪ್ರಾರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡವು ಭಾರತಕ್ಕೆ ಆಗಮಿಸಿದೆ.

ಪಾಕಿಸ್ತಾನ ತಂಡದ ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 29ರಂದು ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಪೂರ್ವಭಾವಿ ಪಂದ್ಯವನ್ನು ಆಡಲಿದ್ದು, ಅಕ್ಟೋಬರ್ 3ರಂದು ಆಸ್ಟ್ರೇಲಿಯಾ ವಿರುದ್ಧ ಎರಡನೆ ಪಂದ್ಯವಾಡಲಿದೆ. ಪಾಕಿಸ್ತಾನ ತಂಡದ ವಿಶ್ವಕಪ್ ಅಭಿಯಾನವು ಹೈದರಾಬಾದ್‌‌ನಲ್ಲಿ ನೆದರ್ಲೆಂಡ್ಸ್‌ ತಂಡದ ವಿರುದ್ಧ ಪ್ರಾರಂಭವಾಗಲಿದ್ದು, ಅಕ್ಟೋಬರ್ 10ರಂದು ಶ್ರೀಲಂಕಾ ತಂಡದ ವಿರುದ್ಧ ಎರಡನೆಯ ಪಂದ್ಯವನ್ನಾಡಲಿದೆ.

https://x.com/TheRealPCB/status/1707128719079580104?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!