Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

PAK vs BAN 1st test: ಪಾಕ್‌ ಸೋಲಿಸಿ ಐತಿಹಾಸಿಕ ದಾಖಲೆ ಬರೆದ ಬಾಂಗ್ಲಾದೇಶ

ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಕ್‌ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಬಾಂಗ್ಲಾದೇಶ ಗೆಲುವು ದಾಖಲಿಸಿತು.

ಆ ಮೂಲಕ ಪಾಕ್‌ ನೆಲದಲ್ಲಿ ಮೊದಲ ಟೆಸ್ಟ್‌ ಗೆಲುವು ದಾಖಲಿಸಿದ ಹೆಗ್ಗಳಿಕೆಗೆ ಬಾಂಗ್ಲಾ ಪಾತ್ರವಾಯಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು 448 ರನ್‌ಗಳಿಸಿ ಡಿಕ್ಲೇರ್‌ ಘೋಷಿಸಿತು. ದ್ವಿಶತಕ ಅಂಚಿನಲ್ಲಿದ್ದ ಮೊಹಮ್ಮದ್‌ ರಿಜ್ವಾನ್‌ 171(239) ರನ್‌ ಗಳಿಸಿ ಸ್ಕ್ರೀಜ್‌ನಲ್ಲಿದ್ದರು. ಈ ವೇಳೆ ಡಿಕ್ಲೇರ್‌ ಘೋಷಿಸಿದ ನಾಯಕನ ವಿರುದ್ಧ ಸಿಡಿಮಿಡಿಗೊಂಡು ಬ್ಯಾಟ್‌ ಬೀಸಿ ಹೊರನಡೆದರು. ಸೌದ್‌ ಶಕೀಲ್‌ 141(261) ರನ್‌ ಬಾರಿಸಿ ತಂಡಕ್ಕೆ ನೆರವಾದರು. ಬಾಂಗ್ಲಾ ಪರವಾಗಿ ಇಸ್ಲಾಂ ಹಾಗೂ ಮಹ್ಮೂದ್‌ ತಲಾ ಎರಡು ವಿಕೆಟ್‌ ಕಬಳಿಸಿ ಮಿಂಚಿದರು.

ಬೃಹತ್‌ ಮೊತ್ತ ದಾಖಲಿಸಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ಆಟಗಾರರ ಎಲ್ಲಾ ಲೆಕ್ಕಾಚಾರಗಳನ್ನು ಬಾಂಗ್ಲಾ ಆಟಗಾರರು ತಲೆ ಕೆಳಗೆ ಮಾಡಿದರು. ಮುಷ್ಪಿಕರ್‌ ರಹೀಮ್‌ ಅವರು 191(341) ರನ್‌ಗಳಿಸಿ ದ್ವಿಶತಕ ವಂಚಿತರಾದರು. ಬಾಂಗ್ಲಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 167.3 ಓವರ್‌ಗಳಿಗೆ ಆಲ್‌ಔಟ್‌ ಆಗಿ 565 ರನ್‌ ಗಳಿಸಿ ಮುನ್ನಡೆ ಸಾಧಿಸಿತು. ಪಾಕ್‌ ಪರ ನಸೀಮ್‌ ಮೂರು, ಮೊಹಮ್ಮದ್‌ ಅಲಿ, ಶಾಹಿನ್‌ ಶಾ ಅಫ್ರಿದಿ ಹಾಗೂ ಶಹಜಾದ್‌ ತಲಾ ಎರಡು ವಿಕೆಟ್‌ ಕಬಳಿಸಿದರು.

ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಪಾಕ್‌ಗೆ ಬಾಂಗ್ಲಾ ಬೌಲರ್‌ಗಳು ಕಾಡಿದರು. ಮೆಹದಿ ಹಸನ್‌ ಪ್ರಮುಖ ನಾಲ್ಕು ವಿಕೆಟ್‌ ಕಬಳಿಸಿದರೇ, ಹಸನ್‌ ಮಹ್ಮೂದ್‌ ಮೂರು ವಿಕೆಟ್‌ ಪಡೆದರು. ರಜ್ವಾನ್‌ 51(80) ರನ್‌ ಗಳಿಸಿದ್ದೇ ಪಾಕ್‌ ಪರ ಹೆಚ್ಚಿನ ರನ್‌ ಆಗಿತ್ತು.

ಅಂತಿಮವಾಗಿ ಪಾಕ್‌ ಕೇವಲ 30ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಬಾಂಗ್ಲಾ ಯಾವುದೇ ವಿಕೆಟ್‌ ನಷ್ಟವಿಲ್ಲದೇ ಗುರಿ ಮುಟ್ಟಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದರು.

ಪಂದ್ಯಶ್ರೇಷ್ಠ: ಮುಷ್ಪಿಕರ್‌ ರಹೀಮ್‌

ಸಂಕ್ಷಿಪ್ತ ಸ್ಕೋರ್‌:

ಪಾಕಿಸ್ತಾನ್‌ ಮೊದಲ ಇನ್ನಿಂಗ್ಸ್‌: 448ಕ್ಕೆ 6 (113 ಓವರ್‌)
ಬಾಂಗ್ಲಾ ಮೊದಲ ಇನ್ನಿಂಗ್ಸ್‌: 565ಕ್ಕೆ 10 (167.3 ಓವರ್‌)
ಪಾಕಿಸ್ತಾನ್‌ ಎರಡನೇ ಇನ್ನಿಂಗ್ಸ್‌: 146ಕ್ಕೆ 10 (55.5 ಓವರ್‌)
ಬಾಂಗ್ಲಾ ಎರಡನೇ ಇನ್ನಿಂಗ್ಸ್‌: 30ಕ್ಕೆ 0 (6.3 ಓವರ್‌)

Tags: